ಹುಬ್ಬಳ್ಳಿ: ನಾಳೆ ದೇಶಾದ್ಯಂತ ಒಂದು ದಿನ ಪೆಟ್ರೋಲ್ ಬಂಕ್‌ಗಳ ಮುಷ್ಕರ ಕರೆ ಹಿನ್ನೆಲೆಯಲ್ಲಿ ಇಂದೇ ಪೆಟ್ರೋಲ್ ಬಂಕ್‌ಗಳ ಬಳಿ ಜನರ ನೂಕು ನುಗ್ಗಲು ಉಂಟಾಗಿದೆ.
ಡೀಸೆಲ್ ಮತ್ತು ಪೆಟ್ರೋಲ್ ಹಾಕಿಸಿಕೊಳ್ಳಲು ಸಾಲುಗಟ್ಟಿ ನಿಂತ ವಾಹನ ಸವಾರರು ಸಾಕಷ್ಟು ಸಂಖ್ಯೆಯಲ್ಲಿ ಬಂಕ್ ಮುಂದೆ ಸೇರಿದ್ದರು. ಹುಬ್ಬಳ್ಳಿಯ ಬಹುತೇಕ ಪೆಟ್ರೋಲ್ ಬಂಕ್ ಗಳು ಫುಲ್ ಆಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಇದರ ಪ್ರಮಾಣ ಮತ್ತಷ್ಟು ಹೆಚ್ಚಳವಾಗಿದೆ.
ಗ್ರಾಮೀಣ ಭಾಗದ ಜನರು ಕ್ಯಾನ್ ಗಳನ್ನು ಹಿಡಿದು, ವಾಹನಗಳ ಸಮೇತ ಸಾಲುಗಟ್ಟಿ ನಿಂತ ಜನ ಪೆಟ್ರೋಲ್ ಮತ್ತು ಡೀಸೆಲ್ ಸಿಗದೆ ಹೋದಲ್ಲಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ ಎಂಬ ಆತಂಕ ಹೀಗಾಗಿ ಟ್ಯಾಂಕ್ ಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾದರು.
ದಿಢೀರ ಆಗಿ ತೆರಿಗೆ ಇಳಿಸಿದ್ದರಿಂದ ಆದ ನಷ್ಟ ಭರ್ತಿ ಮಾಡಿಕೊಡುವಂತೆ ಆಗ್ರಹಿಸಿರುವ ಬಂಕ್ ಮಾಲೀಕರು ಒಂದು ದಿನ ಪೆಟ್ರೋಲ್ ಬಂಕ್ ಬಂದ್ ಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಈಗ ಬಂಕ್ ಫುಲ್ ರಷ್ ಆಗಿವೆ.
Kshetra Samachara
30/05/2022 03:24 pm