ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಶಿಕ್ಷಕರಿಗಿಲ್ಲಾ ಸಂಬಳ, ದಸರಾ ರಜಾ ಖಾಲಿ ಜೇಬು ಸದಾ!

ಕುಂದಗೋಳ : ಸರ್ಕಾರಿ ಶಾಲೆಗಳಿಗೆ ಎಲ್ಲೇಡೆ ದಸರಾ ರಜೆ ಆರಂಭವಾಗಿದ್ದು, ರಜೆ ಮಜೆಯಲ್ಲಿ ಸರ್ಕಾರಿ ಶಾಲೆ ಮಕ್ಕಳು ಹಾಗೂ ಸರ್ಕಾರಿ ಶಿಕ್ಷಕರು ಖುಷ್ ಆಗಿದ್ದಾರೆ, ಆದ್ರೆ..ಆ ಖುಷಿ ಇದೇ ಅತಿಥಿ ಶಿಕ್ಷಕರಿಗೆ ಇಲ್ಲಾ ಅನ್ನೋದೆ ಬೇಸರದ ಸಂಗತಿ.

ಹೌದು ! ಕುಂದಗೋಳ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಶಾಲೆಯ 86 ಜನ ಹಾಗೂ ಪ್ರೌಢ ಶಾಲೆಯ 30 ಜನರಿಗೆ ಪ್ರಸಕ್ತ ವರ್ಷದ ಜೂನ್ ತಿಂಗಳಿಂದ ಸಪ್ಟೇಂಬರ್ ತಿಂಗಳ ವರೆಗಿನ ಸಂಬಳ ಸಂದಾಯವಾಗಿಲ್ಲ.

ಇನ್ನೂ 2021-22ನೇ ಸಾಲಿನಲ್ಲಿ ಅತಿಥಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ ಪ್ರಾಥಮಿಕ 72 ಜನ ಶಿಕ್ಷಕರು ಪ್ರೌಢ ಶಾಲೆಯ 17 ಜನ ಶಿಕ್ಷಕರಿಗೆ ಫೆಬ್ರವರಿ ಹಾಗೂ ಮಾರ್ಚ್ ಎರೆಡು ತಿಂಗಳ ಅಂದಾಜು 13 ಲಕ್ಷ ರೂಪಾಯಿ ಸಂಬಳ ಸಂದಾಯವಾಗಬೇಕಿದೆ. ಸದ್ಯ ಕಡಿಮೆ ಸಂಬಳದಲ್ಲಿ ದುಡಿದ ಶಿಕ್ಷಕರು ರಜೆ ದಿನದಲ್ಲಿ ಖಾಲಿ ಕೈಯಲ್ಲಿ ಕೂರುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಮಾಡಿದೆ.

ಇದಲ್ಲದೆ ಒಟ್ಟು ಕುಂದಗೋಳ ತಾಲೂಕಿನಲ್ಲಿ 166 ಜನ ಖಾಯಂ ಶಿಕ್ಷಕರ ಕೊರತೆ ಇದ್ದು, ಪಾಪಾ ಸಂಬಳ ಇಲ್ಲದೆ ಹೋದ್ರು, ಅತಿಥಿ ಶಿಕ್ಷಕರು ಪಾಠ ಮಾಡ್ತಾ ಇರೋದು ವಿಪರ್ಯಾಸದ ಸಂಗತಿ.

ಇದೀಗ ಪ್ರಸಕ್ತ ವರ್ಷ ಜೂನ್ ಸಪ್ಟೇಂಬರ್ ನಾಲ್ಕು ತಿಂಗಳ ಹಣ ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಬಂದು ವಾರ ಕಳೆದರೂ ತಾಂತ್ರಿಕ ಅಡಚಣೆಯಿಂದ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಆಡಳಿತಕ್ಕೆ ಸಂದಾಯ ಆಗಿಲ್ಲಾ.

ಒಟ್ಟಾರೆ ಮಹಾನವಮಿ, ದಸರಾ, ದೀಪಾವಳಿ, ಹಬ್ಬದ ದಿನಗಳಲ್ಲಿ ಅತಿಥಿ ಶಿಕ್ಷಕರು ಸಪ್ಪೆ ಮೋರೆ ಹಾಕುವಂತಾಗಿದೆ.

ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

Edited By : Somashekar
Kshetra Samachara

Kshetra Samachara

06/10/2022 07:00 pm

Cinque Terre

56.64 K

Cinque Terre

5

ಸಂಬಂಧಿತ ಸುದ್ದಿ