ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಡಿಜೆಗೆ ಅವಕಾಶ ನೀಡದಿದ್ದಕ್ಕೆ ಯುವಕರು ಬೇಸರ

ಕಲಘಟಗಿ: ಗಣೇಶನ ಹಬ್ಬ ಬಂದ್ರೆ ಸಾಕು ಯುವಕರಿಗೆ ಎಲ್ಲಿಲ್ಲದ ಸಡಗರ ಸಂಭ್ರಮ ಆದರೆ ಈ ಬಾರಿ ಕಲಘಟಗಿ ತಾಲೂಕಿನ ಗಣೇಶನ ಯುವಕ ಮಂಡಳಿಯವರು ಬೇಸರ ವ್ಯಕ್ತ ಪಡಿಸಿದ್ದಾರೆ. ಕಾರಣ ಕಲಘಟಗಿಯಲ್ಲಿ ನಡೆದ ಗಣೇಶನ ಹಬ್ಬದ ಶಾಂತಿ ಸಭೆಯಲ್ಲಿ ತಾಲೂಕಿನ ಅಧಿಕಾರಿಗಳು ಡಿಜೆ ಸೌಂಡಗಳಿಗೆ ಅವಕಾಶ ನಿಡದೆ ಇರುವುದರಿಂದ ಗಣೇಶ ಯುವಕ ಮಂಡಳದವರು ಬೇಸರ ವ್ಯಕ್ತ ಪಡಿಸಿದ್ದಾರೆ.

ಕಾರಣ ಕಳೆದ ಬಾರಿಯೂ ಸಹ ಇದೆ ರೀತಿ ಡಿಜೆ ಸೌಂಡಗಳಿಗೆ ಅವಕಾಶ ನಿಡದೇ ಇರುವುದರಿಂದ ತಾಲೂಕಿನಲ್ಲಿ ಯಾವದೇ ರೀತಿಯ ಡಿಜೆಗಳು ಹಚ್ಚಲಾಗಲಿಲ್ಲ. ಆದರೆ ಕೊನೆಯ ಹಂತದಲ್ಲಿ ಸಿ.ಎಂ ಬೊಮ್ಮಾಯಿ ಕ್ಷೇತ್ರವಾದ ಶಿಗ್ಗಾಂವಿಯಲ್ಲಿ ಡಿಜೆಗಳಿಗೆ ಅವಕಾಶ ನೀಡಿದ್ದಾರೆ.

ಸರಕಾರದ ಆದೇಶ ಎಲ್ಲ ಜಿಲ್ಲೆಗಳಿಗೂ ಒಂದೆ ರೀತಿಯಲ್ಲಿ ಅನ್ವಯಿಸುತ್ತದೆ ಆದರೆ ಮುಖ್ಯಮಂತ್ರಿಗಳ ಕ್ಷೇತ್ರ ಅಂದ ಮಾತ್ರಕ್ಕೆ ಅಲ್ಲಿಮಾತ್ರ ಅವಕಾಶ ನೀಡುವುದು ಎಷ್ಟು ಸರಿ ಎಂದು ತಾಲೂಕಿನ ಯುವಕರು ಪ್ರಶ್ನೆ ಮಾಡಿದ್ದಾರೆ. ಈ ಬಾರಿಯೂ ಅಲ್ಲಿ ಡಿಜೆಗಳಿಗೆ ಅವಕಾಶ ನೀಡುವುದಾದರೆ ನಮ್ಮ ತಾಲೂಕಿನಲ್ಲೂ ಅವಕಾಶ ನೀಡಲಿ ಎಂದು ಯುವಕರು ಸಿಎಂಗೆ ಮನವಿ ಮಾಡಿದ್ದಾರೆ.

ವರದಿ: ಉದಯ ಗೌಡರ

Edited By : Manjunath H D
Kshetra Samachara

Kshetra Samachara

25/08/2022 07:04 pm

Cinque Terre

26.16 K

Cinque Terre

2

ಸಂಬಂಧಿತ ಸುದ್ದಿ