ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಂಜೂರಾತಿ ಇಲ್ಲದ ಹುದ್ದೆಯಲ್ಲಿ ಕರ್ತವ್ಯ: ಸಾರಿಗೆ ಸಂಸ್ಥೆ ಅಧಿಕಾರಿಗಳ ಅಂಧ ದರ್ಬಾರ್...!

ಹುಬ್ಬಳ್ಳಿ: ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಅಧಿಕಾರಿಗಳಿಂದ ಅಂಧಾ ದರ್ಬಾರ್ ಹೆಚ್ಚಾಗಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿರುವ ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪವೊಂದು ಕೇಳಿ ಬರುತ್ತಿದೆ. ಮಂಜೂರಾತಿ ಇಲ್ಲದ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುವಂತ ಅಧಿಕಾರಿಗಳ ಅಂಧಾ ದರ್ಬಾರ್ ಬೆಳಕಿಗೆ ಬಂದಿದೆ.

ಚಾಲಕ- ನಿರ್ವಾಹಕರಿಗೆ ವೇತನ ನೀಡಲು ಹಣ ಇಲ್ಲ. ಬಸ್‌ಗಳಿಗೆ ಡಿಸೇಲ್ ಹಾಕಿಸಲು ಹಣ ಇಲ್ಲ. ಆದರೂ ಕೂಡ ಅಧಿಕಾರಿಗಳ ಶೋಕಿ ನಿಂತಿಲ್ಲ. ಆರ್ಥಿಕ ಸಂಕಷ್ಟ ಸರಿದೂಗಿಸಲು ಹುದ್ದೆ ಕಡಿತಕ್ಕೆ‌ ವಾಯುವ್ಯ ಸಾರಿಗೆ ಸಂಸ್ಥೆ‌ ಮುಂದಾಗಿದೆ. ಆಡಳಿತ ವೆಚ್ಚಕ್ಕೆ ಕಡಿವಾಣ ಹಾಕಲು 211 ಹುದ್ದೆಗೆ ಕತ್ತರಿ ಹಾಕುಲು ಪ್ಲಾನ್ ಮಾಡಿದೆಯಂತೆ. ಈ ಬಗ್ಗೆ ಸಾರಿಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ ವಾಯುವ್ಯ ಸಾರಿಗೆ ಸಂಸ್ಥೆ, ಡ್ರೈವರ್ ಕಂಡಕ್ಟರ್ ಗಳಿಗೆ ವೇತನ ಕೊಡಲು ಹಣ ಇಲ್ಲ. ಗ್ರ್ಯಾಚೂಟಿಗೂ ಸಹ ಹಣ ಇಲ್ಲ. ಆದರೆ ಮಂಜೂರಾತಿ ಇಲ್ಲದೇ ಹುದ್ದೆಯಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಮುಂದಾಗಿದ್ದಾರೆ. ಸರ್ಕಾರದಿಂದ ಮಂಜೂರಾತಿ ಇಲ್ಲದೆ ಹುದ್ದೆಯಲ್ಲಿ ಕೆಲ ಅಧಿಕಾರಿಗಳು ಕೆಲಸ ನಿರ್ವಹಣೆ ಮಾಡುತ್ತಿರುವುದು ಯಾವ ಲೆಕ್ಕ? ಭ್ರಷ್ಟ ಅಧಿಕಾರಿಗಳಿಗೆ ಲೂಟಿಗೆ ಅವಕಾಶ ಮಾಡಿಕೊಡಲು ಈ ತಂತ್ರನಾ...? ಈ ಬಗ್ಗೆ ಲಿಖಿತ ದಾಖಲೆಯ ಮೂಲಕ ಸಾರಿಗೆ ಸಂಸ್ಥೆಯ ರಾಜೇಂದ್ರ ಕಠಾರಿಯಾಗೆ ಹುಬ್ಬಳ್ಳಿ ವಕೀಲರು ದೂರು ನೀಡಿದ್ದಾರೆ.

ವಾಯುವ್ಯ ಸಾರಿಗೆ ಸಂಸ್ಥೆಯ 'ಸ್ಪೆಷಲ್ ಆಫೀಸರ್ ಫಾರ್ ಎಂಡಿ' ಹುದ್ದೆಗೆ ಯಾವುದೇ ಮಂಜೂರಾತಿ ಇಲ್ಲ. ಆದ್ರೂ ಈ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಕೆ.ಎಲ್ ಕುಮಾರಸ್ವಾಮಿ. ಕೆಎಸ್ಆರ್‌ಟಿಸಿ ಎಂ.ಡಿಗೂ ಇಲ್ಲ ಸ್ಪೆಷಲ್ ಆಫಿಸರ್. ಸಾರಿಗೆ ಸಚಿವಾಲಯದ ಕಾರ್ಯದರ್ಶಿಗಳಿಗೂ ಇಲ್ಲ ಸ್ಪೆಷಲ್ ಆಫಿಸರ್. ಆದರೇ ವಾಯುವ್ಯ ಸಾರಿಗೆ ಸಂಸ್ಥೆಯ ಎಂಡಿಗೆ ಮಾತ್ರ ಸ್ಪೆಷಲ್ ಆಫಿಸರ್ ಹುದ್ದೆ. ಕಳೆದ 7 ವರ್ಷದಿಂದ ಸ್ಪೆಷಲ್ ಆಫಿಸರ್ ಹುದ್ದೆಯಲ್ಲಿ ಆರ್‌.ಎಲ್ ಕುಮಾರಸ್ವಾಮಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಎಂ.ಡಿ ಇಲ್ಲದ ವೇಳೆ ಇವರೇ ಕಡತಗಳಿಗೆ ಸಹಿ ಮಾಡುವುದು. ಮಂಜೂರಾತಿ ಇಲ್ಲದ ಹುದ್ದೆಯಲ್ಲಿ ಕಾರ್ಯಭಾರ ನಡೆಸುತ್ತಿದ್ದಾರೆ ಅಧಿಕಾರಿ ಈ ಬಗ್ಗೆ ಎಂ.ಡಿ ಏನು ಹೇಳ್ತಾರೆ ಕೇಳಿ.

ಒಟ್ಟಿನಲ್ಲಿ ಮಂಜೂರಾತಿ ಇಲ್ಲದ ಹುದ್ದೆಯಲ್ಲಿ ಇರುವ ಅಧಿಕಾರಿ ಪ್ರತಿ ತಿಂಗಳು 80 ಸಾವಿರ ವೇತನ ಪಡಿತಿದ್ದಾರಂತೆ. ಸಂಚಾರಿ ನಿರೀಕ್ಷಕರಾಗಿ ಸೇವೆಗೆ ಬಂದಿದ್ದ ಆರ್.ಎಲ್ ಕುಮಾರಸ್ವಾಮಿ, ಹೈದರಾಬಾದ್ ಕರ್ನಾಟಕ ಕೋಟಾದಡಿ ಪದೋನ್ನತಿ ಪಡೆದು- ವಾಯುವ್ಯ ಸಾರಿಗೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಈಗ ಮಂಜೂರಾತಿ ಇಲ್ಲದ ಹುದ್ದೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಈ ಬಗ್ಗೆ ಸಾರಿಗೆ ಸಚಿವರು ಸೂಕ್ತ ತನಿಖೆಗೆ ಆಗ್ರಹಿಸಿ ಶಿಸ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ.

Edited By : Manjunath H D
Kshetra Samachara

Kshetra Samachara

08/08/2022 02:14 pm

Cinque Terre

32.86 K

Cinque Terre

0

ಸಂಬಂಧಿತ ಸುದ್ದಿ