ಕುಂದಗೋಳ : ಅಬ್ಬಾ ! ತಹಶೀಲ್ದಾರ ನಮ್ಮೂರಿಗೆ ಬರ್ತಾರೆ ನಮ್ಮ ಸಮಸ್ಯೆ ಬಗೆಹರಿಯುತ್ತೇ ಎಂದು ಖುಷಿ ಪಟ್ಟ ಕುಂದಗೋಳ ತಹಶೀಲ್ದಾರ ಮೊಟ್ಟ ಮೊದಲ ಗ್ರಾಮ ವಾಸ್ತವ್ಯ ಅಕ್ಷರಶಃ ಜನರ ನಿರೀಕ್ಷೆ ಹಾಳುಮಾಡಿದೆ.
ಹೌದು ! ಕಳೆದ ಫೆಬ್ರವರಿ 20ರ ಮೂರನೇ ಶನಿವಾರ 2021 ರಲ್ಲಿ ಗುಡೇನಕಟ್ಟಿ ಗ್ರಾಮದಲ್ಲಿ ನಡೆದಂತಹ ತಹಶೀಲ್ದಾರರ ಗ್ರಾಮ ವಾಸ್ತವ್ಯ ಕುರಿತು ಅಲ್ಲಿನ ಜನ ಪಬ್ಲಿಕ್ ನೆಕ್ಸ್ಟ್ ಜೊತೆ ಹಂಚಿಕೊಂಡ ಅಭಿಪ್ರಾಯ ನೀವೆ ಕೇಳ್ಬಿಡಿ.
ಒಟ್ಟಾರೆ ಸರ್ಕಾರ ಹಳ್ಳಿ ಹಳ್ಳಿಗಳ ಅಭಿವೃದ್ಧಿಗಾಗಿ ಜಾರಿಗೆ ತಂದಂತಹ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಯಾಕೆ ಹೆಸರಿಗಷ್ಟೇ ನಡೀತಾ ಇದೆ? ಜನರ ಸಮಸ್ಯೆಗೆ ಯಾಕೆ ಪರಿಹಾರ ಸಿಗ್ತಾ ಇಲ್ಲಾ ? ಹಾಗಿದ್ರೇ ತಹಶೀಲ್ದಾರರ ಗ್ರಾಮ ವಾಸ್ತವ್ಯ ಕೇವಲ ಸರ್ಕಾರದ ನಿಯಮ ಪಾಲನೆಗೆ ನಡೀತಾ ಇದೆಯಾ ? ಈ ಎಲ್ಲ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿಗಳು ಉತ್ತರ ನೀಡಬೇಕಿದೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
29/07/2022 07:28 pm