ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಂತೆಯಂತಾದ ಸಾಮಾನ್ಯ ಸಭೆ: ಸದಸ್ಯರ ನಡುವೆ ಜಟಾಪಟಿ

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಆರಂಭದಲ್ಲಿಯೇ ಸದಸ್ಯರ ನಡುವೆ ಗಲಾಟೆ ನಡೆದಿದೆ. ಮೇಯರ್ ಭಾಷಣ ಮುಕ್ತಾಯಗೊಳ್ಳುತ್ತಿದ್ದಂತೆಯೇ ಬಿಜೆಪಿ ಹಾಗೂ ಕಾಂಗ್ರೆಸ್ ಚುನಾಯಿತ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ.

ಹೌದು.. ಸಭಾಭವನದಲ್ಲಿ ಮೇಯರ್ ಭಾಷಣ ಮುಕ್ತಾಯಗೊಂಡಿದ್ದು, ಸರ್ವ ಸದಸ್ಯರು ಮೇಯರ್ ಭಾಷಣದ ಬಗ್ಗೆ ಅಭಿಪ್ರಾಯ ವ್ಯಕ್ಯಪಡಿಸಬೇಕಿತ್ತು. ಈ ಸಂದರ್ಭದಲ್ಲಿ ಧ್ವನಿ ಎತ್ತಿದ ಸುವರ್ಣ ಕಲಕುಂಟ್ಲ ಅವರು, ಭಾಷಣ ಬೇಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಧ್ವನಿ ಎತ್ತೋಣ ಎಂದು ಸಮಸ್ಯೆ ಪ್ರಸ್ತುತ ಪಡಿಸಲು ಮುಂದಾದ ಸಂದರ್ಭದಲ್ಲಿ ಸದಸ್ಯರ ನಡುವೆ ಜಟಾಪಟಿ ನಡೆದಿದೆ.

ಇದೇ ವೇಳೆ ಸದಸ್ಯರು ಒಕ್ಕೊರಲಿನಿಂದ ಮೇಯರ್ ಭಾಷಣದ ಅಭಿಪ್ರಾಯಕ್ಕೆ ಅನುಕೂಲ ಮಾಡಿಕೊಟ್ಟಿರುವ ದೃಶ್ಯಗಳು ಕಂಡು ಬಂದವು.

Edited By :
Kshetra Samachara

Kshetra Samachara

30/06/2022 12:59 pm

Cinque Terre

18.68 K

Cinque Terre

0

ಸಂಬಂಧಿತ ಸುದ್ದಿ