ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರೈಲ್ವೆ ನಿಲ್ದಾಣಗಳಲ್ಲಿ ಹೈ ಅಲರ್ಟ್: ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್

ಹುಬ್ಬಳ್ಳಿ: ಸೇನಾ ಪಡೆಗಳ ನೇಮಕಾತಿಗಾಗಿ ಕೇಂದ್ರ ಸರ್ಕಾರ ನೂತನವಾಗಿ ರೂಪಿಸಿರುವ 'ಅಗ್ನಿಪಥ' ಯೋಜನೆಯ ವಿರುದ್ಧ ದೇಶದ ಹಲವೆಡೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ವಲಯದ ವಿವಿಧ ನಿಲ್ದಾಣಗಳಲ್ಲಿ ಹೈ ಅಲರ್ಟ್ ಹಾಗೂ ಎಲ್ಲೆಡೆ ಬಂದೋಬಸ್ತ್ ಹೆಚ್ಚಿಸಿದ್ದಾರೆ.

ಹೌದು. ಹುಬ್ಬಳ್ಳಿ, ಧಾರವಾಡ ಸೇರಿದಂತೆ ವಿವಿಧ ಸ್ಟೇಶನ್‌ಗಳಲ್ಲಿ ಹೆಚ್ಚಿನ ಘೋಷಿಸಲಾಗಿದೆ. ಹುಬ್ಬಳ್ಳಿ, ಧಾರವಾಡ, ನವಲೂರ, ಅಳ್ಳಾವರ, ಹಾವೇರಿ, ರಾಣಿಬೆನ್ನೂರ ಸೇರಿದಂತೆ ವಿವಿಧ ನಿಲ್ದಾಣಗಳಲ್ಲಿ ರೈಲ್ವೆ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.

ಇಂದಿನಿಂದ ಕೆಎಸ್‌ಆರ್‌ಪಿಯ ಒಂದು ತುಕಡಿಯನ್ನೂ ಹೆಚ್ಚಿನ ಭದ್ರತೆಗೆ ನಿಯೋಜಿಸಲಾಗುತ್ತಿದೆ. ನಿಲ್ದಾಣಗಳಲ್ಲಿ ರೈಲು ನಿಲ್ಲುವ ಸ್ಥಳಗಳಲ್ಲಿ ನಿಗಾ ವಹಿಸಲು ಎಡಿಜಿಪಿ ಅಲೋಕಕುಮಾರ್ ಸೂಚಿಸಿದ್ದಾರೆ. ಜೂ.22ರವರೆಗೆ ಹೈಅಲರ್ಟ್ ಘೋಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Edited By :
Kshetra Samachara

Kshetra Samachara

18/06/2022 12:30 pm

Cinque Terre

31.27 K

Cinque Terre

0

ಸಂಬಂಧಿತ ಸುದ್ದಿ