ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹಾರಿತು ಕನ್ನಡದ ಹೊಚ್ಚ ಹೊಸ ಧ್ವಜ-ಇದು ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ !

ಧಾರವಾಡ: 'ಧಾರವಾಡ ಪಾಲಿಕೆ ಕಚೇರಿ ಮೇಲೆ ಹಾರಾಡುತ್ತಿದೆ ಹರಿದ ಕನ್ನಡದ ಬಾವುಟ' ಎಂಬ ಶೀರ್ಷಿಕೆಯಡಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಬೆಳಿಗ್ಗೆಯಷ್ಟೇ ಪ್ರಸಾರ ಮಾಡಿದ್ದ ವರದಿಗೆ ಮೇಯರ್ ಈರೇಶ್ ಅಂಚಟಗೇರಿ ಅವರು ತುರ್ತು ಸ್ಪಂದನೆ ನೀಡಿದ್ದಾರೆ.

ಹರಿದ ಕನ್ನಡದ ಬಾವುಟವನ್ನು ಕೆಳಗಿಳಿಸಿ ಹೊಚ್ಚ ಹೊಸ ಕನ್ನಡದ ಬಾವುಟವನ್ನು ಪಾಲಿಕೆ ಕಚೇರಿ ಮೇಲೆ ಹಾರಿಸಿದ್ದಾರೆ.

ಪಾಲಿಕೆ ಕಚೇರಿ ಮೇಲಿದ್ದ ಕನ್ನಡದ ಬಾವುಟ ಹರಿದು ಹಾರಾಡುತ್ತಿತ್ತು. ಬೆಳಿಗ್ಗೆಯಷ್ಟೇ ಈ ವಿಷಯದ ಮೇಲೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಬೆಳಕು ಚೆಲ್ಲಿತ್ತು. ವರದಿಯನ್ನು ನೋಡಿದ ಮೇಯರ್ ಈರೇಶ್ ಅಂಚಟಗೇರಿ ಅವರು ಆ ಧ್ವಜವನ್ನು ಕೆಳಗಿಳಿಸಿ ಅದರ ಬದಲಿಗೆ ಮತ್ತೊಂದು ಹೊಸ ಕನ್ನಡದ ಬಾವುಟವನ್ನು ಪಾಲಿಕೆ ಕಚೇರಿ ಮೇಲೆ ಹಾರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Edited By : Manjunath H D
Kshetra Samachara

Kshetra Samachara

31/05/2022 01:53 pm

Cinque Terre

16.22 K

Cinque Terre

2

ಸಂಬಂಧಿತ ಸುದ್ದಿ