ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಾರಾಗೃಹದಲ್ಲಿ ಮಗು ಇರೋದು ಯಾಕೆ?: ನ್ಯಾಯಮೂರ್ತಿಗಳ ಪ್ರಶ್ನೆ

ಧಾರವಾಡ: ಧಾರವಾಡ ಕೇಂದ್ರ ಕಾರಾಗೃಹಕ್ಕೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಅಲ್ಲಿನ ಮಹಿಳಾ‌‌ ಕಾರಾಗೃಹಕ್ಕೂ ಭೇಟಿ ನೀಡಿದರು. ಮಹಿಳಾ ಕೈದಿ‌ಯೊಬ್ಬರ ಜೊತೆ ಇರುವ‌ ಮಗು ಬಗ್ಗೆ ವಿಚಾರಣೆ ನಡೆಸಿ, ಮಗು ಯಾಕೆ ಇಲ್ಲಿ ಇರಬೇಕು ಎಂದು ಪ್ರಶ್ನೆ ಮಾಡಿದರು. ನ್ಯಾಯಮೂರ್ತಿಗಳು ಮಗುವನ್ನು ಶಾಲೆಗೆ ಕಳಿಸುವಂತೆ ಜೈಲು ಅಧೀಕ್ಷಕರಿಗೆ ಮಾಹಿತಿ ನೀಡಿದ್ದಾರೆ.

ಧಾರವಾಡ ಕೇಂದ್ರ ಕಾರಾಗೃಹಕ್ಕೆ ಅಲ್ಲದೆ ಮಹಿಳಾ‌‌ ಕಾರಾಗೃಹಕ್ಕೂ ಭೇಟಿ ನೀಡಿದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಧ್ಯಕ್ಷರೂ ಆಗಿರುವ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಮಹಿಳಾ ಕೈದಿಗಳ ಕುರಿತು ಮಾಹಿತಿ ವಿಚಾರಣೆ ನಡೆಸಿದರು. ಇದೇ ವೇಳೆ ಮಗುವನ್ನು ಮಾತನಾಡಿಸಿದ ನ್ಯಾಯಮೂರ್ತಿಗಳು ನೀನು ಶಾಲೆಗೆ ಹೋಗಿ ಚೆನ್ನಾಗಿ ಓದಬೇಕು ಎಂದು ಕಿವಿಮಾತು ಹೇಳಿದ್ದಾರೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

20/05/2022 08:46 pm

Cinque Terre

94.21 K

Cinque Terre

11

ಸಂಬಂಧಿತ ಸುದ್ದಿ