ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರಿಂದ ಪಥಸಂಚಲನ

ಗುರುವಾರ ಪಟ್ಟಣದಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ನವಲಗುಂದ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ ಮಠಪತಿ ಹಾಗೂ ಪಿಎಸ್ಐ ಕಲ್ಮೇಶ ಬೆನ್ನೂರ ಅವರ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ಕೈಗೊಳ್ಳಲಾಗಿತ್ತು.

ಜಿಲ್ಲೆಯ ವಿವಿಧ ಠಾಣೆಗಳಿಂದ ಪೊಲೀಸ್ ಸಿಬ್ಬಂದಿಯನ್ನು ಕರೆಯಿಸಲಾಗಿದ್ದು, ಶಿವಮೊಗ್ಗದ ಸೀಗೆಹಟ್ಟಿಯಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಪಥಸಂಚಲನ ನಡೆಸಲಾಯಿತು.

ಇನ್ನು ಪಟ್ಟಣದ ಪೊಲೀಸ ಠಾಣೆಯಿಂದ ಆರಂಭವಾದ ಪಥಸಂಚಲನ ಕಳ್ಳಿ ಮಠ, ಚೌಡಿ, ರಾಮಲಿಂಗ ಓಣಿ, ಭೋವಿ ಓಣಿ, ವಿನಾಯಕ ಪೇಟೆ, ಗಾಂಧೀ ಮಾರುಕಟ್ಟೆ ಮಾರ್ಗವಾಗಿ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಮತ್ತೆ ಪೊಲೀಸ್ ಠಾಣೆಯವರೆಗೆ ನಡೆಸಲಾಯಿತು.

Edited By :
Kshetra Samachara

Kshetra Samachara

24/02/2022 03:44 pm

Cinque Terre

32 K

Cinque Terre

0

ಸಂಬಂಧಿತ ಸುದ್ದಿ