ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಯರಗುಪ್ಪಿ ಗ್ರಾಪಂ ಪಿಡಿಒ ಅಮಾನತು, ಜನರ ಹೋರಾಟಕ್ಕೆ ಜಯ

ಕುಂದಗೋಳ : ಕರ್ತವ್ಯಲೋಪ ಮಾಡಿ, ಕರ್ನಾಟಕ ನಾಗರೀಕ ಸೇವಾ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕುಂದಗೋಳ ತಾಲೂಕ ಪಂಚಾಯಿತಿ ಯರಗುಪ್ಪಿ ಗ್ರಾಮ ಪಂಚಾಯಿತಿ ಪಿಡಿಓ ನವಾಬಸಾಬ್ ಅಲಿಸಾಬ್ ನದಾಫ್ ಅವರನ್ನು ಅಮಾನತು ಮಾಡಲಾಗಿದೆ.

ಹೌದು ! ಕಳೆದ ಹಲವಾರು ದಿನಗಳಿಂದ ವಿಪರೀತ ಭ್ರಷ್ಟಾಚಾರದಲ್ಲಿ ತೊಡಗಿದ್ದ ಗ್ರಾಮ ಪಂಚಾಯಿತಿ ಪಿಡಿಓ ಕಾರ್ಯವೈಖರಿ ಬಗ್ಗೆ ಖಾಸಗಿ ಪತ್ರಿಕೆ ಹಾಗೂ ಸುದ್ಧಿ ಮಾಧ್ಯಮಗಳು ಸುದ್ಧಿ ಬಿತ್ತರಿಸುತ್ತಲೇ ಬಂದಿದ್ದವು, ಇದಲ್ಲದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವರ್ತನೆ ವಿರುದ್ಧ ಹಲವು ಸಂಘಟನೆ ಹಾಗು ಗ್ರಾಪಂ ಸದಸ್ಯರು, ಸ್ವತಃ ಗ್ರಾಮಸ್ಥರೇ ಪ್ರತಿಭಟನೆ ಸಹ ನಡೆಸಿದ್ದರು.

ಇದೀಗ ಯರಗುಪ್ಪಿ ಪಿಡಿಓ ಕರ್ತವ್ಯಲೋಪ, ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದಿರುವುದು, ಅನಧಿಕೃತ ಗೈರು, ಯೋಜನಾ ವರದಿ ಅನುಷ್ಠಾನದಲ್ಲಿ ವಿಳಂಬದ ಎಲ್ಲ ವಿವರಗಳನ್ನು ಅರಿತ ಜಿಪಂ ಸಿಇಒ ಡಾ.ಬಿ ಸುಶೀಲಾ ಅವರು ಜನೆವರಿ 10 ರಂದು ಪಿಡಿಓ ನವಾಬಸಾಬ್ ಅಲಿಸಾಬ್ ನದಾಫ್ ಅವರನ್ನು ಅಮಾನತು ಮಾಡಿ ಆದೇಶ ಮಾಡಿದ್ದಾರೆ.

ಇದಲ್ಲದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಕೇಳಿ ಬಂದ ದೂರುಗಳನ್ನು ಸಮರ್ಪಕ ತನಿಖೆ ಮಾಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿ, ಪೂರ್ವ ಅನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಟ್ಟು ಕದಲದಂತೆ ಪಿಡಿಒಗೆ ತಾಕೀತು ಮಾಡಿದ್ದಾರೆ.

ಒಟ್ಟಾರೆ ಶಾಸಕರ ಗ್ರಾಮದಲ್ಲೇ ಜನರ ಕಣ್ಣಿಗೆ ಮಣ್ಣೆರೆಚಿದ್ದ ಪಿಡಿಓಗೆ ತಕ್ಕ ಶಾಸ್ತಿ ಆಗಿದ್ದು, ಜನರ ಹೋರಾಟಕ್ಕೆ ಜಯ ಸಿಕ್ಕಿದೆ.

Edited By : Shivu K
Kshetra Samachara

Kshetra Samachara

16/01/2022 10:31 am

Cinque Terre

49.21 K

Cinque Terre

5

ಸಂಬಂಧಿತ ಸುದ್ದಿ