ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಲೀಸ್ ಕಮೀಷನರ್ ಗೆ ನ್ಯೂ ಇಯರ್ ಗುಡ್ ನ್ಯೂಸ್: ಪ್ರಮೋಷನ್ ಜೊತೆಗೆ ಆಯುಕ್ತರಾಗಿ‌ ಮುಂದುವರಿಕೆ...!

ಹುಬ್ಬಳ್ಳಿ: ಹೊಸ ವರ್ಷದ ಆರಂಭದಲ್ಲಿ ಎಲ್ಲರಿಗೂ ಸಿಹಿ ಸುದ್ಧಿ ಬರುವುದು ಬಹಳ ವಿರಳ ಆದರೆ ನಮ್ಮ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಗೆ ಮಾತ್ರ ಹೊಸ ವರ್ಷ ಸಂತಸವನ್ನು ತಂದುಕೊಟ್ಟಿದ್ದು, ದಕ್ಷ ಪೊಲೀಸ್ ಅಧಿಕಾರಿ ಲಾಭುರಾಮ್ ಅವರಿಗೆ ಪೊಲೀಸ್ ಇಲಾಖೆ ಪ್ರಮೋಷನ್ ನೀಡಿದೆ.

ಹೌದು.. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ಇವತ್ತು ಟ್ರಾನ್ಸಫರ್ ಆಗ್ತಾರೆ.. ನಾಳೆ ಟ್ರಾನ್ಸಫರ್ ಆಗ್ತಾರೆ ಎಂದು ಬಕಪಕ್ಷಿಗಳಂತೆ ಕಾದು ಕುಳಿತಿದ್ದ ಹಲವರಿಗೆ 2021ರ ರಾತ್ರಿ ಸರಕಾರ ಶಾಕ್ ನೀಡಿದೆ.

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ ಲಾಬುರಾಮ್ ಅವರು, ಈಗ ಹೋಗ್ತಾರೆ, ಆಗ ಹೊಗ್ತಾರೆ ಎಂದು ಪದೇ ಪದೇ ವದಂತಿಗಳನ್ನ ಇಲಾಖೆಯ ಕೆಲವರು ಹಬ್ಬಿಸುತ್ತಿದ್ದರು. ಮೊನ್ನೆ ಮೊನ್ನೆಯಂತೂ ಲಾಬುರಾಮ್ ಅವರಿಗೆ ಪ್ರಮೋಷನ್ ಇದೆ. ಬೇರೆ ಕಡೆ ಹೋಗ್ತಾರೆ, ಲೋಕೇಶಕುಮಾರ ಬರ್ತಾರೆ. ತ್ಯಾಗರಾಜನ್ ಬರ್ತಾರೆ ಎಂದು ಊಹಾಪೋಹಗಳನ್ನ ಎಬ್ಬಿಸಲಾಗುತ್ತಿತ್ತು. ಆದರೆ ಸರ್ಕಾರ ಇದೆಲ್ಲದಕ್ಕೂ ತೆರೆ ಏಳೆದಿದ್ದು,‌ದಕ್ಷ ಪೊಲೀಸ್ ಅಧಿಕಾರಿಗೆ ಬಡ್ತಿ ನೀಡಿದೆ.

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ನಲ್ಲಿ ಆಡಳಿತ ವ್ಯವಸ್ಥೆ ಸುಧಾರಿಸಿದ ದಕ್ಷ ಐಪಿಎಸ್ ಅಧಿಕಾರಿ ಲಾಬುರಾಮ್ ಅವರಿಗೆ ಪ್ರಮೋಷನ್ ನೀಡಿ, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರನ್ನಾಗಿ ಮುಂದುವರೆಸಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

31/12/2021 11:05 pm

Cinque Terre

23.64 K

Cinque Terre

17

ಸಂಬಂಧಿತ ಸುದ್ದಿ