ಹುಬ್ಬಳ್ಳಿ- ಕೊರೊನಾ ಸಂದರ್ಭದಲ್ಲಿ ಅದೆಷ್ಟೋ ಕುಟುಂಬಗಳು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು, ಅದರಂತೆ ಈಗ ಮನೆಯ ವಿದ್ಯುತ್ ಬಿಲ್ ಪಾವತಿ ಮಾಡದ ಹಿನ್ನಲೆಯಲ್ಲಿ, ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಮೀಟರ್ ತೆಗೆದು ಶಾಕ್ ನೀಡಿದ್ದಾರೆ.
ಹೌದು,,,, ಹೀಗೆ ಗುಂಪು ಗುಂಪಾಗಿ, ನಿಂತು ಹೆಸ್ಕಾಂ ಅಧಿಕಾರಿಗಳ ಜೊತೆ ಚರ್ಚೆ ಹಾಗೂ ವಾಗ್ವಾದ ಮಾಡುತ್ತಿರುವ ದೃಶ್ಯ ಕಂಡು ಬಂದಿದ್ದು ಹುಬ್ಬಳ್ಳಿಯ ಗಿರಣಿಚಾಳದಲ್ಲಿ. ಇಲ್ಲಿ ವಾಸಿಸುವ ಜನರು ಬಹುತೇಕ ಬಡವರು ಒಂದು ದಿನ ದುಡಿಯದಿದ್ರೆ ಅವರಿಗೆ ಊಟಕ್ಕು ಪರದಾಡುವ ಪ್ರಸಂಗ ಬಂದೊದಗುತ್ತೆ, ಇಂತಹ ಸಂದರ್ಭದಲ್ಲಿ ವಿದ್ಯುತ್ ಬಿಲ್ ಕಟ್ಟಿಲ್ಲ ಎಂದು, ಅಧಿಕಾರಿಗಳು ಮನೆಯ ವಿದ್ಯುತ್ ಮೀಟರ್ ತೆಗೆದುಕೊಂಡು ಹೋಗಿದ್ದಾರೆ, ಆದ್ದರಿಂದ ಆಕ್ರೋಶಗೊಂಡ ಸ್ಥಳೀಯರ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಕಂತುಗಳಲ್ಲಿ ಹಣ ಪಾವತಿ ಮಾಡುವುದಾಗಿ ತಿಳಿಸಿದ್ದಾರೆ.
ಇನ್ನು ಅಧಿಕಾರಿಗಳು ಸಹ ಅವರ ಮಾತಿಗೆ ಸ್ಪಂದಿಸಿ ಆದಷ್ಟು ಬೇಗ ವಿದ್ಯುತ್ ಬಿಲ್ ಪಾವತಿ ಮಾಡಿ ಎಂದು ಸಲಹೇ ನೀಡಿ ಅವರ ಮನವಿ ಸ್ಪಂದಿಸುವ ಕೆಲಸ ಮಾಡಿದ್ದಾರೆ.
Kshetra Samachara
17/12/2021 04:07 pm