ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಲ್ಯ ವಿವಾಹ ನಿಷೇಧ ಕಾಯ್ದೆ ಉಲ್ಲಂಘನೆ: ಆರೋಪಿಗಳನ್ನು ಶೀಘ್ರ ಬಂಧಿಸಿ

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಕಳೆದ ಏಪ್ರೀಲ್‌ನಿಂದ ಇಲ್ಲಿಯವರೆಗೆ 10 ಬಾಲ್ಯ ಬಾಲ್ಯವಿವಾಹಗಳನ್ನು ತಡೆಯಲಾಗಿದೆ. ಐದು ಬಾಲ್ಯ ವಿವಾಹ ಪ್ರಕರಣಗಳನ್ನು ದಾಖಲಿಸಲಾಗಿದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ 2 ಪ್ರಕರಣಗಳ ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ 3 ಪ್ರಕರಣಗಳ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಸಂಜೆ ನಡೆದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನವಲಗುಂದ ತಾಲೂಕಿನ ಶಿರೂರ ಗ್ರಾಮದ ಗುತ್ತಿ ಬಸವೇಶ್ವರ ದೇವಸ್ಥಾನದಲ್ಲಿ 2020 ರ ಜೂನ್ 11 ರಂದು ನಡೆದ ವಿವಾಹ ಹಾಗೂ 2020 ರ ಅಕ್ಟೋಬರ್ 28 ರಂದು ಹುಬ್ಬಳ್ಳಿ ಹೊಸ ಗಬ್ಬೂರಿನ ಗಾಳಿ ದುರ್ಗಮ್ಮನ ದೇವಾಲಯದಲ್ಲಿ ಅಪ್ರಾಪ್ತ ಬಾಲಕಿಯ ವಿವಾಹ ನಡೆದಿತ್ತು ಇದರ ಮಾಹಿತಿ ಆಧರಿಸಿ ಕಳೆದ ಜುಲೈ 3 ರಂದು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ 3 ಪ್ರಕರಣಗಳಲ್ಲಿ ಎರಡು ನವಲಗುಂದ ಹಾಗೂ ಒಂದು ಹುಬ್ಬಳ್ಳಿ ಗ್ರಾಮೀಣ ವಿಭಾಗಕ್ಕೆ ಸಂಬಂಧಿಸಿವೆ. ಈ ಪ್ರಕರಣಗಳ ಆರೋಪಿಗಳನ್ನೂ ಕೂಡ ತ್ವರಿತವಾಗಿ ಬಂಧಿಸಿ, ಬಾಲ್ಯ ವಿವಾಹ ಮಾಡಲು ಪ್ರಯತ್ನಿಸುವವರಿಗೆ ಗಂಭೀರ ಎಚ್ಚರಿಕೆ ಮೂಡಿಸಬೇಕು ಎಂದರು.

ರಕ್ಷಿಸಲ್ಪಟ್ಟ ಬಾಲಕಿಯರಿಗೆ 18 ವರ್ಷಗಳು ಪೂರ್ಣವಾಗುವವರೆಗೆ ಸರ್ಕಾರದ ಬಾಲಮಂದಿರಗಳಲ್ಲಿಯೇ ಪುನರ್ವಸತಿ ಕಲ್ಪಿಸಬೇಕು.

ಜಿಲ್ಲೆಯ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ಕಾರ್ಯನಿರ್ವಹಿಸುತ್ತಿದೆ. ದಿನದ 24 ಗಂಟೆಗಳ ಕಾಲವೂ ಅಲ್ಲಿ ಸಿಬ್ಬಂದಿ ಹಾಜರಿದ್ದು ಸೇವೆ ನೀಡಬೇಕು. ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಹೊಸ ಕಟ್ಟಡದಲ್ಲಿ ಸುಸಜ್ಜಿತ ಕಚೇರಿ ನಿರ್ಮಿಸಲಾಗಿದೆ. ಬರುವ ಡಿಸೆಂಬರ್ 1 ರಿಂದ ಅಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ಕಾರ್ಯ ಪ್ರಾರಂಭಿಸಬೇಕು.

ಅಪೌಷ್ಠಿಕತೆ ನಿವಾರಣೆಗಾಗಿ ಜಿಲ್ಲಾಸ್ಪತ್ರೆ ಹಾಗೂ ಕಿಮ್ಸ್ ‌ನಲ್ಲಿರುವ ಪೌಷ್ಠಿಕತೆ ಪುನರ್ವಸತಿ ಕೇಂದ್ರಗಳಿಗೆ ಮಕ್ಕಳು ಹಾಗೂ ತಾಯಂದಿರನ್ನು ದಾಖಲಿಸಿ, ಅವರ ಅಪೌಷ್ಠಿಕತೆ ನಿವಾರಿಸಬೇಕು. ಜಿಲ್ಲೆಯ ಸಾಂತ್ವನ, ಸ್ವಾಧಾರ, ಸ್ನೇಹ, ಸಖಿ ಕೇಂದ್ರಗಳ ತಂಗುದಾಣಗಳಿಗೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಮೂಲಭೂತ ಸೌಕರ್ಯಗಳನ್ನು ಹಾಗೂ ನಿರ್ಧಿಷ್ಟಪಡಿಸಿದ ವಿದ್ಯಾರ್ಹತೆ ಹೊಂದಿದ ವ್ಯಕ್ತಿಗಳು ಕಾರ್ಯನಿರ್ವಹಿಸುತ್ತಿರುವುನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಪದವಿ, ಸ್ನಾತಕೋತ್ತರ ಪದವಿಗಳ ನೈಜತೆ ಪರಿಶೀಲಿಸಿದ ನಂತರವೇ ಆ ಸಂಸ್ಥೆಗಳಿಗೆ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ.ಎಚ್.ಎಚ್.ಕುಕನೂರ ಸಭೆಯಲ್ಲಿದ್ದರು.

Edited By :
Kshetra Samachara

Kshetra Samachara

24/11/2021 10:34 pm

Cinque Terre

24.13 K

Cinque Terre

1

ಸಂಬಂಧಿತ ಸುದ್ದಿ