ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅನಧಿಕೃತ ಪ್ರಾರ್ಥನಾ ಮಂದಿರ ತೆರವಿಗೆ ಸುಪ್ರೀಂ ಸಿಗ್ನಲ್: ಭಕ್ತರಲ್ಲಿ ಆತಂಕ....!

ಹುಬ್ಬಳ್ಳಿ: ಅನಧಿಕೃತ ಪ್ರಾರ್ಥನಾ ಮಂದಿರ ತೆರವುಗೊಳಿಸಲು ಸುಪ್ರೀಂಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ‌ಅವಳಿನಗರದ ಭಕ್ತರಲ್ಲಿ ಆತಂಕ ಶುರುವಾಗಿದೆ.

ಧಾರವಾಡ ಜಿಲ್ಲೆಯಲ್ಲಿ 324 ಮಂದಿರ ,ಮಸೀದಿ ತೆರವುಗೊಳಿಸಲು ಆದೇಶ ನೀಡಿದ್ದು, 43 ಧಾರ್ಮಿಕ ಕಟ್ಟಡಗಳನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. 281 ಅನಧಿಕೃತವಾಗಿರುವ ಧಾರ್ಮಿಕ ಕಟ್ಟಡ ತೆರವುಗೊಳಿಸುವುದೇ ಸವಾಲಾಗಿದ್ದು, ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿಯಿರುವ ರಾಮಲಿಂಗೇಶ್ವರ ದೇವಾಲಯದ ಭಕ್ತರಲ್ಲಿ ಆತಂಕ ಎದುರಾಗಿದೆ.

ಪುರಾತನ ಕಾಲದ ಶಂಭು ಲಿಂಗ ಗುಡಿಯನ್ನು ಬಿ.ಆರ್.ಟಿ.ಸ್ ಮೇಲ್ಸೇತುವೆ ಕಾಮಗಾರಿ ಸಮಯದಲ್ಲಿಯೂ ತೆರವುಗೊಳ್ಳದ ಗುಡಿ ಈಗ ಸುಪ್ರೀಂ ಕೋರ್ಟ್ ಆದೇಶದಿಂದ ತೆರವುಗೊಳಿಸಲಾಗುತ್ತದೆಯಾ ಎಂಬುವಂತ ಆತಂಕ ಜನರಲ್ಲಿ‌ ಮನೆ ಮಾಡಿದೆ. ಇನ್ನೂ ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆಯಲ್ಲಿ ದೇವಸ್ಥಾನ ತೆರವಿನ ಬಗ್ಗೆ ಆಡಳಿತ ಮಂಡಳಿಯಿಂದ ಚರ್ಚೆ ನಡೆಸಲಾಗುತ್ತದೆ ಎಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.

Edited By : Shivu K
Kshetra Samachara

Kshetra Samachara

14/09/2021 02:06 pm

Cinque Terre

45.25 K

Cinque Terre

37

ಸಂಬಂಧಿತ ಸುದ್ದಿ