ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಚುನಾವಣೆ ಗೆಲ್ಲಲು ಖೊಟ್ಟಿ ದಾಖಲೆ ಸೃಷ್ಟಿ, ಸದಸ್ಯತ್ವ ರದ್ದತಿಗೆ ಆಗ್ರಹ

ಕುಂದಗೋಳ : ತಾಲೂಕಿನ ಗುರುವಿನಹಳ್ಳಿಯ ಗ್ರಾಮದ ರತ್ನವ್ವ ನಾಗಪ್ಪ ಪಡೇಸೂರು ಎಂಬುವವರು ಪ್ರಸಕ್ತ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎಸ್.ಸಿ ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಆದಿ ಜಾಂಬವ ಮಾದಿಗ ತಾಲೂಕು ಸಂಘ ಹಾಗೂ ಡಿಎಸ್ಎಸ್ ಪದಾಧಿಕಾರಿಗಳು ತಹಶೀಲ್ದಾರ ಬಸವರಾಜ ಮೆಳವಂಕಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಹಿಂದೆ ರತ್ನವ್ವ ಅವರ ಮೈದುನ ಪ್ರವರ್ಗ 1ಕ್ಕೆ ಸಂಬಂಧಿಸಿದಂತೆ ಭೋಯರ ಭೋವಿ ಎಂಬ ಪ್ರಮಾಣ ಪತ್ರ ನೀಡಿ ಆಯ್ಕೆಯಾಗಿದ್ದರು, ಇದೀಗ ರತ್ನವ್ವ ಎಸ್.ಸಿ ಪ್ರಮಾಣ ಪತ್ರ ಪಡೆದು ಆಯ್ಕೆಯಾಗಿರುವುದು ಸಮಾಜಕ್ಕೆ ದ್ರೋಹ ಎಸಗುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡು ರತ್ನವ್ವ ಪಡೇಸೂರ ಅವರ ಸದಸ್ಯತ್ವ ರದ್ದುಗೊಳಿಸುವಂತೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಈರಪ್ಪ ನಾಗಣ್ಣನವರ, ಅಶೋಕ್ ಮಾದರ, ಬಸವರಾಜ ಗುಡೇನಕಟ್ಟಿ, ಹೊನ್ನಪ್ಪ ದೊಡ್ಡಮನಿ, ಇತರರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

11/02/2021 04:12 pm

Cinque Terre

17.49 K

Cinque Terre

2

ಸಂಬಂಧಿತ ಸುದ್ದಿ