ಹುಬ್ಬಳ್ಳಿ: ಹೊಸ ವರ್ಷದ ಆಚರಣೆ ಅಂದ್ರೇ ಹುಬ್ಬಳ್ಳಿ ಜನರಿಗಂತೂ ಹಬ್ಬವೇ ಹಬ್ಬ.ಕೊರೋನಾ ಕರಿ ನೆರಳು ಬಂದಿದ್ದೆ ಬಂದಿದ್ದು,ಹುಬ್ಬಳ್ಳಿ ಜನರ ಜೋಶ್ ಗೆ ಮಾತ್ರ ಬ್ರೇಕ್ ಹಾಕಿದೆ.ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುವಲ್ಲಿ ನಮ್ಮ ಹುಬ್ಬಳ್ಳಿ ಜನ ಎತ್ತಿದ ಕೈ. ಹಾಗಿದ್ದರೆ ನಮ್ಮ ಹುಬ್ಬಳ್ಳಿ ಜನ ಹೇಗೆ ಹೊಸ ವರ್ಷವನ್ನು ಆಚರಿಸಿದ್ದಾರೆ ಎಂಬುವಂತ ಮೆಮೊರಿಯಲ್ ಝಲಕ್ ನೋಡಿಕೊಂಡು ಬರೋಣ ಬನ್ನಿ...
ವಾಣಿಜ್ಯನಗರಿ ಹುಬ್ಬಳ್ಳಿಯ ಖಾಸಗಿ ಹೋಟೆಲ್ ಗಳಲ್ಲಿ ಹೊಸ ವರ್ಷ ಆಚರಣೆ ಸಂಭ್ರಮವಂತೂ ಮನೆ ಮಾಡಿರುತ್ತಿತ್ತು.ಆದ್ರೇ ಈ ವರ್ಷ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಹೊಸ ವರ್ಷಾಚರಣೆ ವಿಚಾರವಾಗಿ ಶಿಸ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈಗಾಗಲೇ ಹುಬ್ಬಳ್ಳಿಯಲ್ಲಿ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು,ಹೊಟೇಲ್ ಗಳ ಮಾಲೀಕರನ್ನ ಕರೆದು ಸಭೆ ಮಾಡಿದ್ದಾರೆ.ಕೋವಿಡ್ ನಿಯಮಗಳ ಬಗ್ಗೆ ಮಾಹಿತಿ ನೀಡಿದ್ದು,ಯಾರಾದರೂ ಕೋವಿಡ್ ಉಲ್ಲಂಘನೆ ಮಾಡಿದ್ರೆ ಅವರ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದು,ಎಂದಿನಂತೆ ರಾತ್ರಿ 11ಗಂಟೆಗೆ ಎಲ್ಲವೂ ಕ್ಲೋಸ್ ಆಗಬೇಕು. ಡಿಜೆ, ಸಾಮೂಹಿಕ ಪಾರ್ಟಿ ನಡೆಸುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಹು-ಧಾ ಮಹಾನಗರದಲ್ಲಿ ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್ ಅವರ ನಿರ್ದೇಶನದಲ್ಲಿ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದ್ದು, ಸಾಮೂಹಿಕ ಆಚರಣೆ ಮಾಡದಂತೆ ಈಗಾಗಲೇ ಸೂಚನೆ ನೀಡಲಾಗಿದೆ.ಸರ್ಕಾರದ ಮಾರ್ಗಸೂಚಿಗಳನ್ನ ಪಾಲನೆ ಮಾಡಲು ಹೊಟೇಲ್ ಮಾಲೀಕರಿಗೆ ಸೂಚನೆ ನೀಡಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಮಾಡದಂತೆ ಸೂಚನೆ ನೀಡಲಾಗಿದ್ದು,ನಿಯಮ ಉಲ್ಲಂಘಿಸಿದವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹು-ಧಾ ಮಹಾನಗರ ಪೊಲೀಸ್ ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಧಾರವಾಡ ಜಿಲ್ಲೆಯಲ್ಲಿ ಯಾವುದೇ ಸಂಭ್ರಮಾಚರಣೆ ಇಲ್ಲದಂತಾಗಿದ್ದು,ಕೋವಿಡ್ ನಿಯಮ ಚಾಚೂ ತಪ್ಪದೇ ಪಾಲನೆ ಮಾಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
ಈ ಬಾರಿ ಸಂಭ್ರಮವಿಲ್ಲದ ಹೊಸ ವರ್ಷಾಚರಣೆ ಮಾಡುವಂತಾಗಿದ್ದು,ಎಂದಿನಂತೆ ರಾತ್ರಿ 11ರ ವರೆಗೆ ಮಾತ್ರ ತಾರಾ ಹೋಟೆಲ್ ಗಳು ಓಪನ್ ಇರಲಿದ್ದು, ಸಾಮೂಹಿಕ ಕುಣಿತ, ಕುಡಿತಕ್ಕೆ ಬ್ರೇಕ್ ಹಾಕಲಾಗಿದೆ.
Kshetra Samachara
31/12/2020 07:59 pm