ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಈದ್ಗಾ ಮೈದಾನಕ್ಕೆ ಬರಲು ರೆಡಿಯಾದ ಗಣೇಶ: ಕಾನೂನಾತ್ಮಕ ದಾರಿಗಾಗಿ ಕಾಯುತ್ತಿರುವ ದೇವರು...!

ಹುಬ್ಬಳ್ಳಿ: ಒಂದು ಕಡೆಗೆ ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್ ನೀಡಿರುವ ಹು-ಧಾ ಮಹಾನಗರ ಪಾಲಿಕೆ. ಮತ್ತೊಂದೆಡೆ ಹೈ ಕೋರ್ಟ್ ಮೆಟ್ಟಿಲೇರಿರುವ ಅಂಜುಮನ್ ಸಂಸ್ಥೆ. ಇದೆಲ್ಲದರ ನಡುವೆ ಹುಬ್ಬಳ್ಳಿಯ ವಿವಾದಿತ ಈದ್ಗಾ ಮೈದಾನಕ್ಕೆ ಬರಲು ಸಿದ್ಧವಾಗಿದ್ದಾನೆ ವಿಘ್ನ ನಿವಾರಕ. ಅಷ್ಟಕ್ಕೂ ಸಂಕಷ್ಟಹರ ಗಣಪತಿ ಆಗಮನಕ್ಕೆ ಯಾಕಿಷ್ಟು ವಿಘ್ನ ಅಂತೀರಾ ಈ ಸ್ಟೋರಿ ನೋಡಿ.

ಹೀಗೆ ಎಲ್ಲೆಂದರಲ್ಲಿ ಅಲರ್ಟ್ ಆಗಿ ನಿಂತಿರುವ ಪೊಲೀಸರು. ಎಲ್ಲಿ ನೋಡಿದರೂ ಖಾಕಿ ಕಂಗಾವಲು. ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು ಹುಬ್ಬಳ್ಳಿ ನಗರ. ರಾಜ್ಯದ ಜನರ ದೃಷ್ಟಿಯನ್ನು ತನ್ನತ್ತ ಸೆಳೆಯುವಂತೆ ಮಾಡಿರುವ ವಿವಾದಿತ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿರುವುದೇ ಕಾರಣವಾಗಿದೆ.

ಸುಮಾರು ಹೋರಾಟದ ಐತಿಹಾಸಿಕ ಹಿನ್ನೆಲೆಯನ್ನು ಒಳಗೊಂಡ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಸಮಿತಿ ವರದಿ ನೀಡಿದೆ. ವರದಿ ಪಡೆದ ಪಾಲಿಕೆ ಮೂರು ದಿನಗಳ ಗಣೇಶೋತ್ಸವ ಆಚರಣೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಇದನ್ನು ಪ್ರಶ್ನಿಸಿ ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ಸಂಸ್ಥೆ ಹೈಕೋರ್ಟ್ ಮೊರೆ ಹೋಗಿದೆ. ಇದರ ನಡುವೆಯೂ ಕೂಡ ಹುಬ್ಬಳ್ಳಿಯ ಈದ್ಗಾ ಮೈದಾನಕ್ಕೆ ಬರಲು ವಿಘ್ನೇಶ್ವರ ರೆಡಿ ಆಗ್ತಿದ್ದಾನೆ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಪಾಲಿಕೆಯಿಂದ ಅವಕಾಶ ಈಗಾಗಲೇ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಷ್ಠಾಪನೆಗೆ ವಿಶೇಷ ಗಣೇಶ ಮೂರ್ತಿಯನ್ನು ನಗರದ ಹೊಸೂರಿನಲ್ಲಿ ಇಷ್ಟಾರ್ಥ ಸಿದ್ಧಿ ಗಣೇಶ ಮೂರ್ತಿಯನ್ನು ಸಿದ್ಧಪಡಿಸಲಾಗುತ್ತಿದೆ. ಛಬ್ಬಿ ಮಾದರಿಯ ಇಷ್ಟಾರ್ಥ ಸಿದ್ಧಿ ಗಣೇಶ ಮೂರ್ತಿಯನ್ನು ತಯಾರಿಸಲಾಗಿದ್ದು, ನಾಳೆ ಹಿಂದೂ ಪರ ಸಂಘಟನೆಗಳಿಂದ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ. ಪ್ರತಿಷ್ಠಾಪನೆಗೆ ಮೂರೂವರೆ ಅಡಿ ಇಷ್ಟಾರ್ಥ ಸಿದ್ಧಿ ಗಣಪತಿ ತಯಾರಾಗುತ್ತಿದ್ದು, ಹೈಕೋರ್ಟ್ ನಿರ್ಧಾರದ ಬಳಿಕವೇ ಮಹತ್ವದ ಸಂಗತಿ ಹೊರಬರಬೇಕಿದೆ. ಶಾಂತಿ ಸೌಹಾರ್ದತೆ ಮೂಲಕ ನಾಳೆ ಪ್ರತಿಷ್ಠಾಪನೆಗೊಳ್ಳಲಿರೋ ಗಣೇಶನ ಪ್ರತಿಷ್ಟಾಪನೆಗೆ ಸಕಲ ಸಿದ್ಧತೆ ನಡೆಸಿದ್ದು, ವಾಣಿಜ್ಯನಗರಿ ಜನರ ಚಿತ್ತ ಹೈ ಕೋರ್ಟ್ ನತ್ತ ನೆಟ್ಟಿದೆ.

ಒಟ್ಟಿನಲ್ಲಿ ಕೆಂಪು ಮುಖದ ವಿಘ್ನೇಶ್ವರ ಈದ್ಗಾ ಮೈದಾನಕ್ಕೆ ಬರಲು ಈಗಾಗ್ಲೇ ತಯಾರಾಗಿದ್ದಾನೆ. ಆದರೆ ಇದೆಲ್ಲದಕ್ಕೂ ಕಾನೂನಾತ್ಮಕ ಅವಕಾಶಕ್ಕಾಗಿ ದೇವರು ಕೂಡ ಕಾಯುವಂತಾಗಿದೆ. ಅದೇನೇ ಇರಲಿ. ಹೂಬಳ್ಳಿಯ ಜನರು ಒಂದೇ ಬಳ್ಳಿಯ ಹೂವುಗಳಂತೆ ಜಾತಿ ಮತದ ಅಸಮಾಧಾನ ಬಿಟ್ಟು ಸೌಹಾರ್ದತೆಯಿಂದ ಹಬ್ಬ ಆಚರಿಸುವ ಮೂಲಕ ನಾವೆಲ್ಲರೂ ಭಾರತೀಯರು ಎಂಬುದನ್ನು ಎತ್ತಿ ತೋರಿಸಬೇಕಿದೆ.

ವರದಿ: ಮಲ್ಲೇಶ್ ಸೂರಣಗಿ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Manjunath H D
Kshetra Samachara

Kshetra Samachara

30/08/2022 06:27 pm

Cinque Terre

31.51 K

Cinque Terre

1

ಸಂಬಂಧಿತ ಸುದ್ದಿ