ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬಿಸಿಎ ನಾನ್ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ಕವಿವಿ

ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ

ಧಾರವಾಡ: ಅವರೆಲ್ಲ ಪರೀಕ್ಷೆ ಬರೆದ ಖುಷಿಯಲ್ಲಿದ್ರು.. ಫಲಿತಾಂಶಕ್ಕಾಗಿ ಕಾಯುತ್ತಿದ್ರು. ಇನ್ನೇನು ಫಲಿತಾಂಶ ಕೂಡ ಪ್ರಕಟಗೊಂಡು ನಾವು ಮುಂದಿನ ಸೆಮಿಸ್ಟರ್ ಗೆ ಹಾಜರಾಗುತ್ತೇವೆ ಎಂಬ ಖುಷಿಯಲ್ಲಿರುವಾಗಲೇ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಅವರಿಗೆ ಬಿಗ್ ಶಾಕ್ ನೀಡಿದೆ. ಹೌದು! ಯಾರೋ ಮಾಡಿದ ತಪ್ಪಿಗೆ ಇನ್ನ್ಯಾರಿಗೋ ಶಿಕ್ಷೆ ಕೊಟ್ಟಿದೆ ಈ ಕರ್ನಾಟಕ ವಿಶ್ವವಿದ್ಯಾಲಯ.

ಕಳೆದ ಏಪ್ರಿಲ್ ನಲ್ಲಿ ಬಿಸಿಎ ಮೊದಲ ಸೆಮಿಸ್ಟರ್ ನ ಸಿ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂಬ ವಿಚಾರ ಈಗ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಗೊತ್ತಾಗಿ ಮತ್ತೊಮ್ಮೆ ಪರೀಕ್ಷೆ ನಡೆಸಲು ಮುಂದಾಗಿದೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಪದವಿ ಪರೀಕ್ಷೆ ಪ್ರತಿ ವರ್ಷ ಏಪ್ರಿಲ್ ನಲ್ಲಿ ಮುಗಿಯುತ್ತವೆ. ನಂತರ ಜೂನ್ ಕೊನೆಯ ವಾರದಲ್ಲಿ ಇದರ ಫಲಿತಾಂಶ ಕೂಡ ಹೊರ ಬೀಳುತ್ತದೆ. ಆದರೆ ಈ ಬಾರಿ ಬಿಸಿಎ ಮೊದಲ ಸೆಮಿಸ್ಟರ್ನ ಕಂಪ್ಯೂಟರ್ ಪ್ರೋಗ್ರಾಮಿಂಗ್ ವಿಷಯದ ರೆಗ್ಯುಲರ್ ಪರೀಕ್ಷಾರ್ಥಿಗಳ ಫಲಿತಾಂಶ ಹೊರತುಪಡಿಸಿ, ಈ ನಾಲ್ಕು ಜಿಲ್ಲೆಗಳಲ್ಲಿ ಪರೀಕ್ಷೆ ಕುಳಿತಿದ್ದ ನಾನ್ ಸೆಮಿಸ್ಟರ್ ಹಾಗೂ ಎಕ್ಸಟರ್ನಲ್ ಪರೀಕ್ಷಾರ್ಥಿಗಳ ರಿಸಲ್ಟ್ ಬಂದಿಲ್ಲ.

ಕಾರಣ, ಕಳೆದ ಏಪ್ರಿಲ್ 5 ರಂದು ನಡೆದಿದ್ದ ಪರೀಕ್ಷೆ ವೇಳೆ ಇದೇ ಪೇಪರ್ ಲೀಕ್ ಔಟ್ ಆಗಿದೆ. ಬಿಸಿಎ ಒಂದನೇ ಸೆಮಿಸ್ಟರ್ನ ಕಂಪ್ಯೂಟರ್ ಪ್ರೋಗ್ರಾಮಿಂಗ್ ನ ನಾನ್ ಸಿಬಿಸಿಎಸ್ ನ ಪರೀಕ್ಷೆ ಏಪ್ರಿಲ್ 5 ರಂದು ಇತ್ತು. ಅದೇ ರೀತಿ ಏಪ್ರಿಲ್ 18 ರಂದು ಸಿಬಿಸಿಎಸ್ ಪರೀಕ್ಷೆ ಇತ್ತು. ಆದರೆ ಈ ಎರಡು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬದಲಾಗಿದೆ. 5 ರಂದು ಇದ್ದ ಪರೀಕ್ಷೆಗೆ 18 ರಂದು ಇದ್ದ ಪ್ರಶ್ನೆ ಪತ್ರಿಕೆ ನೀಡಲಾಗಿದೆ. ಅದೇ ರೀತಿ 18 ರಂದು ಇದ್ದ ಪರೀಕ್ಷೆಗೆ 5 ರಂದು ಇದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ನೀಡಿದ್ದಾರೆ.

ಇದು ಹುಬ್ಬಳ್ಳಿಯ ಗ್ಲೋಬಲ್ ಇನ್ನೋವೇಟಿವ್ ಬಿಸಿಎ ಕಾಲೇಜ್ ನಲ್ಲಿ ನಡೆದ ಯಡವಟ್ಟು. ಈ ವಿಷಯ ಕರ್ನಾಟಕ ವಿವಿಗೆ ಈಗ ಗೊತ್ತಾಗಿ, ಮತ್ತೇ ಮರು ಪರೀಕ್ಷೆಗೆ ಕರೆ ನೀಡಿದೆ. ಹೀಗಾಗಿ ಆಗಲೇ ಪರೀಕ್ಷೆ ಬರೆದ ಕವಿವಿ ವ್ಯಾಪ್ತಿಯ ನಾಲ್ಕು ಜಿಲ್ಲೆಗಳ 46 ಕಾಲೇಜುಗಳಲ್ಲಿ ಈ ಪರೀಕ್ಷೆ ನಡೆಯಲಿದ್ದು, ಒಟ್ಟು 374 ವಿದ್ಯಾರ್ಥಿಗಳು ಮತ್ತೇ ಈ ಪರೀಕ್ಷೆ ಬರೆಯಬೇಕಿದೆ.

ಇನ್ನು ಇದೇ ರೀತಿ ಬಿಎಸ್ ಸಿಯ ಎಇಸಿಸಿ ಇಂಗ್ಲಿಷ್ ಹಾಗೂ ಒಇಸಿ ವಿಷಯದ ಕ್ರಿಮಿನಾಲಾಜಿ ವಿಷಯದಲ್ಲಿ ಕೂಡಾ ಯಡವಟ್ಟು ಆಗಿದ್ದು, ಬಿಎಸ್ ಸ್ಸಿ ಎಇಸಿಸಿ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ. ಆದರೆ ವಿದ್ಯಾರ್ಥಿಗಳಿಗೆ ಶಾಮಲಾ ಎಂಬ ಪಾಠ ಹೇಳಬೇಕಿತ್ತು. ಆದರೆ ಆ ಕೆಲಸ ಆಗಿಲ್ಲ. ಹೀಗಾಗಿ ಮತ್ತೇ ಶಾಮಲಾ ಪಾಠ ಮಾಡಿ ಪರೀಕ್ಷೆ ಇಡಲಾಗಿದೆ. ಕೇವಲ ಒಂದು ಕಾಲೇಜ್ ನಲ್ಲಿ ಮಾತ್ರ ಯಡವಟ್ಟು ಆಗಿದ್ದಕ್ಕೆ, ಕವಿವಿ ಮತ್ತೇ ಪರೀಕ್ಷೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ವಿದ್ಯಾರ್ಥಿಗಳು ಪ್ರಶ್ನೆ ಮಾಡಿದ್ದಾರೆ.

ಒಟ್ಟಿನಲ್ಲಿ ಯಾರೋ ಮಾಡಿದ ತಪ್ಪಿಗೆ ಈಗ ಈ ವಿದ್ಯಾರ್ಥಿಗಳು ಮತ್ತೇ ಪರೀಕ್ಷೆ ಬರೆಯುವಂತೆ ಆಗಿದ್ದು ಸರಿಯಲ್ಲ. ಹೀಗಾಗಿ ಯಾರು ತಪ್ಪು ಮಾಡಿದ್ದಾರೆ, ಅವರ ಮೇಲೆ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ನ್ಯಾಯ ಕೊಡಬೇಕಿದೆ.

Edited By : Nagesh Gaonkar
Kshetra Samachara

Kshetra Samachara

28/06/2022 04:19 pm

Cinque Terre

83.45 K

Cinque Terre

1

ಸಂಬಂಧಿತ ಸುದ್ದಿ