ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕವಿವಿಯಲ್ಲಿ ಕುಲಸಚಿವ-ಸ್ವಾಮೀಜಿ ಮಧ್ಯೆ ಜಟಾಪಟಿ ಕಾರಣ ಏನು ಗೊತ್ತಾ?

ಧಾರವಾಡ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಹಾಯಕ ಪ್ರಾಧ್ಯಾಪಕಿ ಶ್ರೀದೇವಿ ಅವರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿರುವುದನ್ನು ವಿರೋಧಿಸಿ ಕವಿವಿ ಕುಲಪತಿ ಕಚೇರಿ ಎದುರು ಮನಸೂರು ರೇವಣಸಿದ್ದೇಶ್ವರ ಮಠದ ಬಸವರಾಜ ದೇವರ ನೇತೃತ್ವದಲ್ಲಿ ಕೆಲವರು ಪ್ರತಿಭಟನೆ ನಡೆಸಿದರು.

ಕವಿವಿ ಕುಲಪತಿ ಕೆ.ಬಿ.ಗುಡಸಿ ಹಾಗೂ ಸಿಂಡಿಕೇಟ್ ಸದಸ್ಯರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಶ್ರೀದೇವಿ ಅವರನ್ನು ಯುಜಿಸಿ ನಿಯಮಾವಳಿ ಪ್ರಕಾರವೇ ನೇಮಿಸಲಾಗಿದೆ. ಇದೀಗ ಅವರನ್ನು ಕರ್ತವ್ಯದಿಂದ ದಿಢೀರ್ ತೆಗೆದು ಹಾಕಲಾಗಿದೆ. ಸೆ.11 ರ ಸಭೆಯಲ್ಲಿ ಕರ್ತವ್ಯ ತೇರ್ಗಡೆ ವಿಚಾರಕ್ಕೆ ಠರಾವು ಪಾಸ್ ಮಾಡಲಾಗಿದೆ. ಈಗ ಅದನ್ನು ಏಕಾಏಕಿ ಬದಲಾವಣೆ ಮಾಡಿ ಕೆಲಸ ಕಳೆಯುವ ಕೆಲಸ ಮಾಡಲಾಗುತ್ತಿದೆ. ವಿವಿಯ ಸಿಂಡಿಕೇಟ್ ಸದಸ್ಯರ ನಿರ್ಧಾರದಿಂದಾಗಿ ಶ್ರೀದೇವಿ ಅವರಿಗೆ ಮೋಸ ಮಾಡಲಾಗುತ್ತಿದೆ. ಕೂಡಲೇ ಕವಿವಿಯು ಸೆ.11 ರಂದು ಮಾಡಿರುವ ಠರಾವು ಪಾಲಿಸಬೇಕು ಎಂದು ಆಗ್ರಹಿಸಲಾಯಿತು.

ಈ ವೇಳೆ ಕುಲಸಚಿವರು ಮತ್ತು ಬಸವರಾಜ ದೇವರ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯಿತು. ಶ್ರೀದೇವಿ ಅವರಿಗೆ ಅನ್ಯಾಯವಾದರೆ ಮುಂದೆ ಉಗ್ರ ಹೋರಾಟ ಮಾಡುವುದಾಗಿಯೂ ಎಚ್ಚರಿಕೆ ನೀಡಲಾಯಿತು.

Edited By : Nagesh Gaonkar
Kshetra Samachara

Kshetra Samachara

24/09/2021 03:15 pm

Cinque Terre

117.89 K

Cinque Terre

0

ಸಂಬಂಧಿತ ಸುದ್ದಿ