ಕಲಘಟಗಿ:ತಾಲೂಕಿನ ಜೋಡಳ್ಳಿ ಗ್ರಾಮದಲ್ಲಿ ರಸ್ತೆ ಬಂದ್ ಮಾಡಿ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ಮಾಡಿದ್ದ 18 ಜನರ ಮೇಲೆ ಪ್ರಕರಣ ದಾಖಲಾಗಿದೆ.
ಸರಕಾರಿ ಸಂಗಮೇಶ್ವರ ಪ್ರೌಢಶಾಲೆಯ ವೇತನಾನುದಾನವನ್ನು ಹಿಂದೆ ಪಡೆದು ಶಾಲೆಯ ಶಿಕ್ಷಕರನ್ನು ಬೇರೆ ಶಾಲೆಗೆ ನಿಯೋಜನೆ ಮಾಡಲಾಗಿದ್ದರಿಂದ ದಿ: ಜನವರಿ 25ರಂದು ರಸ್ತೆ ಸಂಚಾರ ತಡೆದು ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದರು.ಪ್ರತಿಭಟನಾ ಸ್ಥಳಕ್ಕೆ ಶಾಸಕ ಸಿ ಎಂ ನಿಂಬಣ್ಣವರ ಹಾಗೂ ಸಿಪಿಐ ಪ್ರಭು ಸೂರಿನ್,ಆಯುಕ್ತರಾದಮೇಜರ್ ಸಿದ್ದಲಿಂಗಯ್ಯ ಹಿರೇಮಠ ಭೇಟಿನೀಡಿ ಅಹ್ವಾಲು ಕೇಳಿದ್ದರು.ಸುಮಾರು ಏಳು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ಜರುಗಿತ್ತು.
ಬೇಕಾಯ್ದೆಶಿರ ಅಕ್ರಮಕೂಟ ಕಟ್ಟಿಕೊಂಡು ಅಪ್ರಾಪ್ತ ಮಕ್ಕಳನ್ನು ಕರೆತಂದು ಯಾವುದೇ ಪೂರ್ವಾನುಮತಿ ಇಲ್ಲದೇ ವಿನಾಕಾರಣ ಚಳುವಳಿ ಮಾಡಿ ರಾಜ್ಯ ರಸ್ತೆ ತಡೆಹಿಡಿದು ಸಾರ್ವಜನಿಕವಾಗಿ ತೊಂದರೆಯನ್ನುಂಟು ಮಾಡಿ,ಸಾವಿರಾರು ವಾಹನಗಳನ್ನು ತಡೆದ ಆರೋಪದ ಮೇಲೆ ಜೋಡಳ್ಳಿ ಗ್ರಾಮದ 18 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.
Kshetra Samachara
27/01/2021 07:59 pm