ಕುಂದಗೋಳ: ಶಾಲಾ- ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಎಂಬ ತೀರ್ಪು ನಿರಾಶೆ ತಂದಿದೆ, ನಿಜ. ಆದರೆ, ನಾವು ಹೈಕೋರ್ಟ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ಮುಸ್ಲಿಂ ಮುಖಂಡ ಮೊಹಮ್ಮದ್ ಸಲೀಂ ಕ್ಯಾಲಕೊಂಡ ಹೇಳಿದರು.
ಅವರು ಹಿಜಾಬ್ ವಿವಾದ ಬಗ್ಗೆ ಹೈಕೋರ್ಟ್ ನೀಡಿದ ತೀರ್ಪಿನ ಕುರಿತಂತೆ ʼಪಬ್ಲಿಕ್ ನೆಕ್ಸ್ಟ್ʼ ಜತೆ ಮಾತನಾಡಿದರು. ಶಾಲಾ- ಕಾಲೇಜುಗಳಲ್ಲಷ್ಟೇ ಹಿಜಾಬ್ ನಿಷೇಧ ಮಾಡಲಾಗಿದೆ. ಸಮವಸ್ತ್ರ ಕಾನೂನಿಗೆ ಅದು ಸರಿ. ಅದನ್ನು ಧಾರ್ಮಿಕವಾಗಿ ಬಳಸಿಕೊಳ್ಳಬೇಡಿ. ಧಾರ್ಮಿಕವಾಗಿ ಹೊರಗಡೆ ನಮ್ಮ(ಮುಸ್ಲಿಂ) ಆಚರಣೆ ಪಾಲನೆ ಮಾಡೋಣ ಎಂದರು.
ಮುಂದಿನ ದಿನಗಳಲ್ಲಿ ಮೌಲ್ವಿಗಳೆಲ್ಲ ಕೂಡಿ ವಿಚಾರ ಮಾಡಿ ಸುಪ್ರೀಂ ಕೋರ್ಟ್ ಗೆ ಹೋಗುವ ಬಗ್ಗೆ ನಿರ್ಧರಿಸುತ್ತೇವೆ. ದಯಮಾಡಿ ಯಾವುದೇ ಶಾಲಾ- ಕಾಲೇಜಿನ ಹಿಂದೂ- ಮುಸ್ಲಿಂ ವಿದ್ಯಾರ್ಥಿಗಳು ಈ ವಿಷಯದಲ್ಲಿ ಜಗಳವಾಡದೆ ಒಂದಾಗಿ ನಮ್ಮ ಕರ್ನಾಟಕ, ನಮ್ಮ ಭಾರತ ದೇಶ ಶಾಂತಿ-ಸೌಹಾರ್ದತೆಯಿಂದ ಇರಲು ಎಲ್ಲರೂ ಒಂದಾಗಿ ಬಾಳೋಣ ಎಂದರು.
Kshetra Samachara
15/03/2022 03:41 pm