ಧಾರವಾಡ: ಮಾಸ್ಕ್ ಹಾಕದೇ ಇರುವವರಿಗೆ ಪೊಲೀಸರು ಧಾರವಾಡದ ಮಾರುಕಟ್ಟೆಯಲ್ಲಿ ದಂಡ ಹಾಕುತ್ತಿದ್ದಾರೆ. ಅದೇ ರೀತಿ ಬೈಕ್ ಸವಾರನೋರ್ವ ಮಾಸ್ಕ್ ಹಾಕದೇ ಬರುತ್ತಿದುದನ್ನು ಕಂಡು ಪೊಲೀಸರು ಆತನನ್ನು ತಡೆಯಲು ಮುಂದಾದ್ರು. ಇದನ್ನೇ ನೆಪವನ್ನಾಗಿಟ್ಟುಕೊಂಡ ಆ ಬೈಕ್ ಸವಾರ ನೀವೇಕೆ ನನ್ನ ಬೈಕ್ ಗೆ ಅಡ್ಡ ಬಂದ್ರಿ.. ನಾನು ಬಿದ್ದಿದ್ರೆ ಏನಾಗ್ತಿತ್ತು?.. ನಾನು ಮಕ್ಕಳನ್ನು ಕರೆದುಕೊಂಡು ಹೋಗ್ತಿದ್ದೆ ಆ ಮಕ್ಕಳಿಗೆ ಪೆಟ್ಟಾಗಿದ್ರೆ ಯಾರು ಜವಾಬ್ದಾರಿ ಎಂದು ದೊಂಬರಾಟ ಶುರು ಮಾಡಿದ. ಇಷ್ಟಕ್ಕೆ ಪೊಲೀಸರು ಆ ವ್ಯಕ್ತಿಯನ್ನು ಸಮಾಧಾನಗೊಳಿಸಿ ಕೊನೆಗೆ ದಂಡವನ್ನೂ ಹಾಕದೇ ಕೈಬಿಟ್ಟಿದ್ದಾರೆ.
Kshetra Samachara
01/10/2020 03:28 pm