ಧಾರವಾಡ: ಎಪಿಎಂಸಿ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು, ಧಾರವಾಡದಲ್ಲೂ ಇದಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಬೆಳಿಗ್ಗೆಯಿಂದಲೇ ಕನ್ನಡಪರ ಹಾಗೂ ರೈತ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡುತ್ತಿವೆ.
ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಲಾರಿ ಚಾಲಕನೊಬ್ಬ ಬಂದ್ ಇದ್ದರೂ ಸರ್ಕಲ್ ಮೂಲಕ ಹಾದು ಹೋಗುತ್ತಿದ್ದ. ಇದನ್ನು ನೋಡಿದ ರೈತ ಮುಖಂಡನೊಬ್ಬ ಬಂದ್ ಇದ್ದರೂ ಎಲ್ಲಿ ಹೋಗುತ್ತಿದ್ದೀಯಾ? ದಾಟಿ ಹೋಗ್ತೀಯಾ? ಈಗ ದಾಟಿ ಹೋಗು ನೋಡೋಣ ಎಂದು ಲಾರಿಗೆ ಅಡ್ಡಲಾಗಿ ಮಲಗಿದ. ನಂತರ ಪೊಲೀಸರು ಆ ರೈತ ಮುಖಂಡನನ್ನು ಬದಿಗೆ ಸರಿಸಿ ಲಾರಿ ದಾಟಿ ಹೋಗಲು ಅನುವು ಮಾಡಿಕೊಟ್ಟ ಘಟನೆ ನಡೆಯಿತು.
Kshetra Samachara
28/09/2020 12:24 pm