ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಗಂಡ-ಹೆಂಡತಿ ಮಧ್ಯೆಯೇ ಸಮನ್ವಯತೆ ಇರೋದಿಲ್ಲ ಬಿಡ್ರಿ

ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಆರ್.ದಿಲೀಪ್ ಹಾಗೂ ಡಿಸಿಪಿ ಕೃಷ್ಣಕಾಂತ್ ಅವರ ಮಧ್ಯೆ ಉಂಟಾಗಿರುವ ಶೀತಲ ಸಮರವನ್ನು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರರಾವ್ ಅವರು ಗಂಡ-ಹೆಂಡತಿ ಜಗಳಕ್ಕೆ ಹೋಲಿಕೆ ಮಾಡಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆಯಲ್ಲಿ ಗಂಡ, ಹೆಂಡತಿ ಮಧ್ಯೆಯೇ ಸಮನ್ವಯದ ಕೊರತೆ ಇರುತ್ತದೆ ಇನ್ನು ಇದ್ಯಾವ ಲೆಕ್ಕ ಬಿಡಿ. ಇದರ ಬಗ್ಗೆ ನಾನು ಪ್ರತಿಕ್ರಿಯೆ ನೀಡೋದಿಲ್ಲ. ಇದು ನನಗೆ ಸಂಬಂಧಿಸಿದ್ದಲ್ಲ ಎಂದಿದ್ದಾರೆ.

ರಾಜ್ಯ ಸರ್ಕಾರ ಡ್ರಗ್ಸ್ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಈ ಡ್ರಗ್ಸ್ ಹೇಗೆ ಪ್ರವೇಶ ಮಾಡುತ್ತಿದೆ ಎಂಬುದರ ಮೂಲ ನಾವು ಪತ್ತೆ ಮಾಡಬೇಕಿದೆ. ವಿಮಾನ ನಿಲ್ದಾಣ, ಬಂದರುಗಳಲ್ಲಿ ಸಾಕಷ್ಟು ಜಾಗೃತೆ ವಹಿಸಲಾಗಿದೆ. ಈ ಹಿಂದೆ ಡ್ರಗ್ಸ್ ಬಗ್ಗೆ ತನಿಖೆ ಮಾಡಲಾಗಿತ್ತು. ಆದರೆ, ಅಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ. ಈಗ ಡ್ರಗ್ಸ್ ವಿಚಾರದಲ್ಲಿ ಕೇವಲ ಒಂದು ಐಸ್ ಬರ್ಗ್ ಹೊರ ಬಂದಿದೆಯಷ್ಟೇ. ಇನ್ನೂ ತನಿಖೆ ಮಾಡಬೇಕಾದದ್ದು ಬಹಳಷ್ಟಿದೆ ಎಂದರು.

ರಾಜ್ಯದಲ್ಲಿ 8 ವಿಮಾನ ನಿಲ್ದಾಣಗಳಿದ್ದು ಎರಡು ವಿಮಾನ ನಿಲ್ದಾಣಗಳಿಗೆ ಸಿಐಎಸ್ಎಫ್ ಭದ್ರತೆ ನೀಡುತ್ತಿದೆ. ಉಳಿದ 6 ವಿಮಾನ ನಿಲ್ದಾಣಗಳಲ್ಲಿ ನಮ್ಮ ಆಂತರಿಕ ಭದ್ರತಾಪಡೆ ಭದ್ರತೆ ನೀಡುತ್ತಿದೆ. ನಮ್ಮ ಪೊಲೀಸರಿಗೆ ಹೆಚ್ಚಿನ ತರಬೇತಿ ನೀಡುವ ಅವಶ್ಯಕತೆ ಇದೆ. ಈ ಸಂಬಂಧ ಇದೇ 7 ಮತ್ತು 8 ನೇ ತಾರೀಖಿನಂದು ಭಯೋತ್ಪಾದಕರು ಬಂದಂತೆ ಹಾಗೂ ಪೊಲೀಸರು ಆ ಕಾರ್ಯಾಚರಣೆ ನಡೆಸಿದಂತೆ ಅಣಕು ಪ್ರದರ್ಶನವೊಂದನ್ನು ಮಾಡಲಾಗುತ್ತಿದೆ ಎಂದರು.

ಎನ್ಐಎ ಈಗಾಗಲೇ ಬೆಂಗಳೂರಿನಲ್ಲಿದೆ. ಭಯೋತ್ಪಾದನೆಗೆ ಸಂಬಂಧಿಸಿದಂತೆ ಇದು ನೇರವಾಗಿ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದೆ. ಸೈಬರ್ ಕ್ರೈಂ ಬಗ್ಗೆ ನಮ್ಮ ಪೊಲೀಸರಿಗೆ ಹೆಚ್ಚಿನ ತಿಳಿವಳಿಕೆ ನೀಡುವ ಅಗತ್ಯವಿದೆ ಎಂದರು.

Edited By :
Kshetra Samachara

Kshetra Samachara

06/10/2020 08:47 pm

Cinque Terre

82.27 K

Cinque Terre

7

ಸಂಬಂಧಿತ ಸುದ್ದಿ