ಧಾರವಾಡ: ಧಾರವಾಡ ಜಿಲ್ಲೆಯಾದ್ಯಂತ ಶ್ರೀಗಂಧದ ಮರ ಕಳ್ಳತನವಾಗುತ್ತಿರುವ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಎರಡು ಸಂಚಿಕೆಗಳನ್ನು ಪ್ರಸಾರ ಮಾಡಿತ್ತು. ಈ ವರದಿಯಿಂದಾಗಿ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಪೊಲೀಸ್ ಇಲಾಖೆಯ ಜಂಟಿ ಸಹಕಾರದೊಂದಿಗೆ ಚಂದನ ಚೋರರ ಪತ್ತೆ ಮತ್ತು ಚಂದನದ ರಕ್ಷಣೆಗಾಗಿ ಒಂದು ಪ್ರತ್ಯೇಕ ತಂಡವನ್ನೇ ರಚನೆ ಮಾಡಿದೆ.
ಇತ್ತೀಚೆಗೆ ಗುಂಗರಗಟ್ಟಿ ಅರಣ್ಯ ಪ್ರದೇಶ, ಸಂಜೀವಿನಿ ಪಾರ್ಕ್ ಹಾಗೂ ಅರಣ್ಯ ಇಲಾಖೆಯ ಕ್ವಾರ್ಟರ್ಸ್ ಹತ್ತಿರವೇ ಶ್ರೀಗಂಧದ ಮರಗಳು ಕಳ್ಳತನವಾಗಿವೆ. ಈ ಸಂಬಂಧ ದೂರು ಸಹ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಒಂದು ತಂಡ ರಚನೆ ಮಾಡಲಾಗಿದೆ. ಪೊಲೀಸ್ ಆಯುಕ್ತ ಆರ್.ದಿಲೀಪ್ ಹಾಗೂ ಎಸ್ಪಿ ವರ್ತಿಕಾ ಕಟಿಯಾರ್ ಅವರೊಂದಿಗೆ ಮಾತನಾಡಿ ಅರಣ್ಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ಶ್ರೀಗಂಧದ ರಕ್ಷಣೆಗೆ ಒಂದು ಪ್ರತ್ಯೇಕ ತಂಡವನ್ನೇ ರಚನೆ ಮಾಡಲಾಗುತ್ತಿದೆ ಎಂದು ಅರಣ್ಯ ಇಲಾಖೆ ಡಿಎಫ್ಓ ಯಶಪಾಲ್ ಕ್ಷೀರಸಾಗರ ಹೇಳಿದರು.
Kshetra Samachara
07/10/2020 06:11 pm