ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಹೋರಾಟದಿಂದಲೇ ಸಮಾನತೆ ಪಡೆಯಬೇಕಿದೆ : ಅನುರಾಧ ಟಿ.ಎಚ್.

ಕುಂದಗೋಳ : ಮಹಿಳೆಯರಿಗೆ ಮಾತಲ್ಲಿ ಮಾತ್ರ ಪುರುಷರಷ್ಟೇ ಸಮಾನತೆ ಇದೆ, ಆದ್ರೇ ಅದನ್ನು ಹೋರಾಟ ಮಾಡಿಯೇ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಜೆ.ಎಮ್.ಎಫ್.ಸಿ ನ್ಯಾಯಾಧೀಶೆ ಅನುರಾಧ ಟಿ.ಎಚ್.ಹೇಳಿದರು.

ಕುಂದಗೋಳ ಪಟ್ಟಣ ಶಿವಾನಂದ ಮಠದ ಬಾಲಕಿಯರ ಪ್ರೌಢಶಾಲೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಈ ಸಾರಿ "ಲಿಂಗ ತಾರತಮ್ಯ ಬದಲಾವಣೆ" ಎಂಬ ಘೋಷವಾಕ್ಯ ಈ ಮಹಿಳಾ ದಿನಾಚರಣೆಯನ್ನು ಯಶಸ್ವಿಗೊಳಿಸಬೇಕಿದೆ ಎಂದರು.

ಬಳಿಕ ಹಿರಿಯ ಶ್ರೇಣಿ ನ್ಯಾಯಾಧೀಶ ಪರಮೇಶ್ವರ್ ಪಿ.ಜೆ ಹಾಗೂ ವಕೀಲರ ಸಂಘದ ಅಧ್ಯಕ್ಷ ಜೆ.ಬಿ.ಸೊರಟೂರ ಮಹಿಳಾ ಕಾನೂನು, ಮಹಿಳಾ ಸೌಲಭ್ಯಗಳ ಕುರಿತು ತಿಳಿಸಿದರು. ಬಳಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರವಿಂದ್ ಕಟಗಿ ಮಾತನಾಡಿದರು.

ಈ ಸಂದರ್ಭದಲ್ಲಿ ವೇದಿಕೆ ಮೇಲೆ ಹಿರಿಯ ವಕೀಲರು, ಹಾಗೂ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಇತರೆ ಸಿಬ್ಬಂದಿಗಳು ಶಾಲಾ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

08/03/2022 09:12 pm

Cinque Terre

20.62 K

Cinque Terre

0

ಸಂಬಂಧಿತ ಸುದ್ದಿ