ನವಲಗುಂದ : ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ 75ನೇ ವರ್ಷದ ಆಜಾದಿ ಕಾ ಅಮೃತ ಮಹೋತ್ಸವ" ಅಂಗವಾಗಿ ಕಾನೂನಿನ ಅರಿವು ನೆರವು ಕಾರ್ಯಕ್ರಮವನ್ನು ಹಿರಿಯ ದಿವಾಣಿ ನ್ಯಾಯಾಧೀಶರಾದ ಎಮ್. ಡಿ. ಮಂಜುನಾಥ ಜ್ಯೋತಿ ಬೆಳೆಗಿಸುವ ಮೂಲಕ ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು, ಸರ್ಕಾರ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಾಡಿದೆ, ಆ ಮೂಲಕ ಹೊಸ ನಿಯಮ ಜಾರಿಯಾಗಿರುತ್ತದೆ. ವಾಹನ ಸವಾರರು ನೂತನ ನಿಯಮದ ಕುರಿತು ತಿಳಿಯುವುದು ಅಗತ್ಯವಾಗಿದೆ. ವಾಹನ ಸವಾರರು ವಾಹನ ದಾಖಲೆ, ಡ್ರೈವಿಂಗ್ ಲೈಸೆನ್ಸ್, ವಾಹನ ವಿಮೆ ಕಡ್ಡಾಯವಾಗಿ ಮಾಡಸಲೇಬೇಕು ಹಾಗೂ ದಾಖಲೆ ಪತ್ರಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಹೇಳಿದರು. ಇದೇ ವೇಳೆ ಕಟ್ಟಡ ಕಾರ್ಮಿಕರಿಗೆ ನ್ಯೂಟ್ರಿಷನ್ ಕಿಟ್ ಹಾಗೂ ಕಾರ್ಮಿಕ ಸುರಕ್ಷಾ ಕಿಟ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಎಮ್. ಡಿ. ಮಂಜುನಾಥ ಸರ್, ಸರ್ಕಾರಿ ವಕೀಲರಾದ ಆನಂದ ಮುರಾಳ, ಕಟ್ಟಡ ಕಾರ್ಮಿಕ ವರ್ಗದವರು ಉಪಸ್ಥಿತರಿದ್ದರು.
Kshetra Samachara
19/10/2021 06:30 pm