ಕುಂದಗೋಳ : ಮನುಷ್ಯನ ದೈನಂದಿನ ಜೀವನದಲ್ಲಿ ಕಾನೂನು ಸೇವೆಗಳು ಅಗತ್ಯವಾಗಿವೆ, ಜೀವನದ ಪ್ರತಿ ಹಂತದಲ್ಲೂ ಲಭ್ಯವಿರುವ ಕಾನೂನು ಸಲಹೆಯನ್ನು ಪ್ರತಿಯೊಬ್ಬರು ಪಡೆದುಕೊಂಡು ಅದಕ್ಕೆ ತಕ್ಕಂತೆ ನಡೆಯಬೇಕು ಎಂದು ಸಿವಿಲ್ ನ್ಯಾಯಾಧೀಶ ರವಿ ಬಾಬು ಚಹ್ವಾಣ್ ಹೇಳಿದರು.
ಕುಂದಗೋಳ ಪಟ್ಟಣದ ಗ್ರಾಮೀಣ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಕಾನೂನು ಸೇವಾ ದಿನಾಚರಣೆ ನಿಮಿತ್ತ ಕಾರ್ಯಕ್ರಮದ ಉದ್ಘಾಟಕರಾದ ಹಿರಿಯ ನ್ಯಾಯಾಧೀಶೆ ಶೈನಿ.ಕೆ.ಎಂ ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು. ಅತಿಥಿಗಳಾಗಿ ಆಗಮಿಸಿದ ವಕೀಲರು ಸಂಘದ ಅಧ್ಯಕ್ಷ ಜಿ.ಬಿ.ಸೊರಟೂರು ಮಾತನಾಡಿ ಸಮಗ್ರ ಕಾನೂನಿನ ಅರಿವು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷ ಸಿಪಿಐ ಬಸವರಾಜ ಕಲ್ಲಮ್ಮನವರ, ಇನ್ನೋರ್ವ ಅತಿಥಿ ಉಪನ್ಯಾಸಕ ವಾಮ್.ಬಿ.ಬಿಳೇಬಾಳ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಹಾಗೂ ಪಟ್ಟಣದ ಸಾರ್ವಜನಿಕರು ಉಪಸ್ಥಿತರಿದ್ದರು.
Kshetra Samachara
09/11/2020 04:39 pm