ಧಾರವಾಡ: ವೀಕೆಂಡ್ ಕರ್ಫ್ಯೂನ ಎರಡನೇ ದಿನವಾದ ಭಾನುವಾರವೂ ಪೊಲೀಸರು ಧಾರವಾಡದಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದ್ದು, ಎರಡನೇ ದಿನವೂ ಧಾರವಾಡದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಸಾರಿಗೆ ಸಂಸ್ಥೆ ಬಸ್ಸುಗಳ ಸಂಚಾರಕ್ಕೆ ಪರವಾನಿಗಿ ನೀಡಲಾಗಿದ್ದು, ವಿನಾಕಾರಣ ಸುತ್ತಾಡುವ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸುವ ಕೆಲಸ ಮಾಡುತ್ತಿದ್ದಾರೆ.
ಆಟೊ ಮೂಲಕ ಸಂಚರಿಸುವ ಪ್ರಯಾಣಿಕರು ಮಾಸ್ಕ್ ಹಾಕದೇ ಇರುವುದನ್ನು ಕಂಡು ಅವರಿಗೂ ದಂಡ ವಿಧಿಸುತ್ತಿದ್ದಾರೆ. ಧಾರವಾಡದ ಅಂಜುಮನ್ ವೃತ್ತ, ಸಿಬಿಟಿ ಸೇರಿದಂತೆ ಅನೇಕ ಕಡೆಗಳಲ್ಲಿ ಪೊಲೀಸರು ನಿಂತು ವಿನಾಕಾರಣ ಸುತ್ತಾಡುವವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.
Kshetra Samachara
16/01/2022 10:35 am