ಕುಂದಗೋಳ : ಸರ್ಕಾರ ಕೊಟ್ಟ ಟೈಮ್ ಸಾಲೋಲ್ಲ ಪೊಲೀಸರ್ ಕರ್ತವ್ಯ ನಿಂತಿಲ್ಲ

ಕುಂದಗೋಳ : ಕೊರೊನಾ ವೈರಸ್ ಹತೋಟಿಗಾಗಿ ಸರ್ಕಾರ ಜಾರಿಗೆ ತಂದಿರುವ ಲಾಕ್ ಡೌನ್ ಆದೇಶಕ್ಕೆ ಕುಂದಗೋಳ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಅಗತ್ಯ ವಸ್ತು ಖರೀದಿಗೆ ಸರ್ಕಾರ ನಿಗದಿಪಡಿಸಿದ ಸಮಯ ಮೀರಿ ರಸ್ತೆಯಲ್ಲಿ ಜನರ ಓಡಾಟ ಆರಂಭವಾಗಿದೆ.

ಜಿಲ್ಲೆಯಲ್ಲಿ ದಿನೇ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಸಂಖ್ಯೆ ತಗ್ಗಿಸಲು ಸರ್ಕಾರ ಮತ್ತು ಜಿಲ್ಲಾಡಳಿತದ ಆದೇಶಕ್ಕೆ ಸಂಬಂಧ ಪಟ್ಟಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಎಷ್ಟೇ ಕರ್ತವ್ಯ ಪ್ರಜ್ಞೆ ತೋರಿದರೂ ಸಹ ಅನಗತ್ಯ ಸಂಚಾರವನ್ನೂ ಈ ಹಳ್ಳಿ ಜನತೆ ಕೈ ಬಿಡುತ್ತಿಲ್ಲಾ.

ಒಟ್ಟಾರೆ ಅಗತ್ಯ ಕೆಲಸದ ನೆಪದಲ್ಲಿ ಮದುವೆ ದಿಬ್ಬಣದ ಹೆಸರಲ್ಲಿ ಸಾಮಾಜಿಕ ಅಂತರ ಮಾಸ್ಕ್ ಮರೆತು ಓಡಾಟ ಮಾಡುವ ವಾಹನಗಳನ್ನು ತಡೆದು ಪೊಲೀಸರು ಕ್ಲಾಸ್ ನಡೆಸಿದ್ದು ಕೊರೊನಾ ವೈರಸ್ ಹತೋಟಿಗೆ ದಿಟ್ಟ ಪ್ರಯತ್ನದಲ್ಲಿದ್ದಾರೆ.

Kshetra Samachara

Kshetra Samachara

6 days ago

Cinque Terre

86.71 K

Cinque Terre

2

  • Sanjay Mujumdar
    Sanjay Mujumdar

    ಸ್ವಾಮಿ ಕೆಲಸ ಇದ್ದವರು ಓಡಾಟ ಮಾಡ್ತಾರ ನಿಮಗ್ ಜರೂರತ್ತು ಇಲ್ಲಂದ್ರ ಸುಮ್ನೆ ಮನೆಯಲ್ಲಿ ಇರ್ರಿ , ಎಲ್ಲರಿಗೂ ಅವರ ಜೀವ ಇಷ್ಟಾ ನೆ ಏನ ಮಾಡಬೇಕು ಜೇವಸಿಲಿಕ್ಕೆ ಓಡಾಟ ಮಾಡ್ತಾರ

  • Chetan Airsang
    Chetan Airsang

    in Dharwad no one police are coming after 10am ......to check all are out side and all shops are close ....... only police seen in main market.... but in all Nagar no visiting all peoples are roming without mask 😷 ..... and in side the area all shops are open ......