ಕುಂದಗೋಳ : ತಾಲೂಕಿನ ಶರೇವಾಡ ಗ್ರಾಮಕ್ಕೆ ಸಿಲಿಂಡರ್ ನೀಡಲು ಬಂದಾತ ಬಿಲ್ ನಲ್ಲಿ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿರುವುದನ್ನು ಪ್ರಶ್ನಿಸಿ ಗ್ರಾಮದ ಯುವಕರು ಹಾಗೂ ಸಿಲಿಂಡರ್ ನೀಡುವವರ ಮದ್ಯೆ ವಾಗ್ವಾದ ನಡೆದಿದೆ. ಈ ವಾಗ್ವಾದದಿಂದ ಕೋಪಗೊಂಡ ಯುವಕರು ಗ್ಯಾಸ್ ಸಿಲಿಂಡರ್ ಸಾಗಿಸುವ ವಾಹನದ ಗಾಳಿ ತೆಗೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು ! ಕುಂದಗೋಳ ಪಟ್ಟಣದ ಅಕ್ಷಯ್ ಇಂಡಿಯನ್ ಗ್ಯಾಸ್ ಡಿಸ್ಟ್ರಿಬ್ಯೂಟರ್ ವತಿಯಿಂದ ಶರೇವಾಡ ಗ್ರಾಮಕ್ಕೆ ಸಿಲಿಂಡರ್ ನೀಡಲು ಬಂದವರು ಬಿಲ್ ಒಳಗೆ ನಮೂದಿಸಿರುವ 713 ರೂಪಾಯಿ ದರದ ಬದಲಾಗಿ 750 ರೂಪಾಯಿಗೆ ಕೇಳಿದ್ದಾರೆ. ಈ ಕಾರಣ 37 ರೂಪಾಯಿ ಯಾಕೆ ಹೆಚ್ಚಿಗೆ ಕೊಡಬೇಕು ನಮ್ಮೂರು ಕುಂದಗೋಳಕ್ಕೆ 7 ಕಿ.ಮೀ ವ್ಯಾಪ್ತಿ ಇದೆ, ಎಂದು ವಾಗ್ವಾದ ಮಾಡಿದ ಯುವಕರು ಕೇವಲ ಇದೊಂದು ಬಾರಿಯಲ್ಲ, ಪ್ರತಿ ಬಾರಿ ಬಂದಾಗಲೂ ಇದೇ ಕಥೆ ಎಂದು ಆರೋಪಿಸಿದ್ದಾರೆ.
ಸದ್ಯ ವಾಗ್ವಾದದ ವಿಡಿಯೋವನ್ನು ಅಲ್ಲಿನ ಗ್ರಾಮಸ್ಥರು ಪಬ್ಲಿಕ್ ನೆಕ್ಸ್ಟ್ ಗೆ ನೀಡಿ ಈ ತರಹದ ಕೆಲಸಗಳಿಗೆ ಸಂಬಂಧ ಪಟ್ಟವರು ಕಡಿವಾಣ ಹಾಕಿ ಎನ್ನುತ್ತಿದ್ದಾರೆ.
Kshetra Samachara
21/12/2020 07:37 pm