ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದ್ದು,ತೀರ್ಪು ನಾಳೆ ಹೊರ ಬೀಳುವ ಸಾಧ್ಯತೆ ಇದೆ.
ಮಾರ್ಚ 2019 ರಿಂದ ಜನಪ್ರತಿನಿಧಿಗಳ ಆಡಳಿತದಿಂದ ದೂರವಾಗಿದ್ದ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ.
ಹು-ಧಾ ಮಹಾನಗರಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಹೊರಡಿಸಲಾಗಿದ್ದ ವಾರ್ಡ ಮರು ವಿಂಗಡಣೆ ಹಾಗೂ ಮೀಸಲಾತಿ ಅಧಿಸೂಚನೆಗಳನ್ನು ನ್ಯಾಯಾಲಯಕ್ಕೆ ನೀಡಿದ ಭರವಸೆಯಂತೆ ಹಿಂಪಡೆಯದೇ ವಿಳಂಬ ಮಾಡಿದ್ದಕ್ಕೆ ನಗರಾಭಿವೃದ್ದಿ ಇಲಾಖೆ ಪ್ರಧಾನ ಕಾರ್ಯದರ್ಶಿ ಕಳೆದ ತಿಂಗಳು ದಿ.30ರಂದು ಹೈಕೋರ್ಟಗೆ ಬೇಷರತ್ ಕ್ಷಮೆ ಕೋರಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ನೇತೃತ್ವದ ವಿಭಾಗೀಯ ಪೀಠದೆದುರು ನಗರಾಭಿವೃದ್ಧಿ ಕಾರ್ಯದರ್ಶಿ ತುಷಾರ್ ಗಿರಿನಾಥ ಪ್ರಮಾಣ ಪತ್ರ ನೀಡಿ ಹು.ಧಾ.ಪಾಲಿಕೆ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಈ ನಿಟ್ಟಿನಲ್ಲಿ ಕೋರ್ಟ ನೀಡುವ ನಿರ್ದೇಶನಗಳಿಗೆ ಸರ್ಕಾರ ಬದ್ದ ಎಂದು ಹೇಳಿಕೆ ನೀಡಿರುವುದನ್ನು ದಾಖಲಿಸಿಕೊಂಡು ಡಿ.10ಕ್ಕೆ ವಿಚಾರಣೆ ಮುಂದೂಡಿತ್ತು.
ಇಂತಹದ್ದೆ ಪರಿಸ್ಥಿತಿಯಿರುವ ಬಿಬಿಎಂಪಿ ಚುನಾವಣೆಗೆ ಸಂಬಂದಿಸಿದ ಮತ್ತೊಂದು ಅರ್ಜಿಯ ವಿಚಾರಣೆಯನ್ನು ವಿಸ್ತ್ರತವಾಗಿ ವಿಚಾರಣೆ ನಡೆಸಲಾಗಿದ್ದು ಅದೇ ಅರ್ಜಿಯ ತೀರ್ಪಿನಲ್ಲಿ ಬಹುತೇಕ ಅಂಶಗಳು ಒಳಗೊಳ್ಳಲಿರುವ ಹಿನ್ನೆಲೆಯಲ್ಲಿ ನಾಳೆ ಬಿಬಿಎಂಪಿ ಚುನಾವಣೆ ತೀರ್ಪು ಪ್ರಕಟಗೊಂಡ ನಂತರ ಹುಬ್ಬಳ್ಳಿ ಧಾರವಾಡ ಪಾಲಿಕೆ ತೀರ್ಪು ಹೊರಬೀಳುವ ಸಾಧ್ಯತೆಗಳು ದಟ್ಟವಾಗಿವೆ.
ಪಾಲಿಕೆಗೆ ಶೀಘ್ರ ಚುನಾವಣೆ ನಡೆಸಲು ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ನಾಗರಾಜ ಗೌರಿ ಮತ್ತು ಇತರರು ಹೈಕೋಟ್ ವಿಭಾಗೀಯ ಪೀಠದೆದುರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಹೊರಡಿಸಲಾಗಿದ್ದ ವಾರ್ಡ ಮರು ವಿಂಗಡಣೆ ಹಾಗೂ ಮೀಸಲಾತಿ ಅಧಿಸೂಚನೆಗಳನ್ನು ಹಿಂಪಡೆಯದೇ ವಿಳಂಬ ಮಾಡಿದ್ದಕ್ಕೆ ಕ್ಷಮೆ ಯಾಚಿಸಿದ ಹಿನ್ನೆಲೆಯಲ್ಲಿ ಹಳೆಯ 67 ವಾರ್ಡುಗಳಿಗೆ ಚುನಾವಣೆ ನಡೆಯುವುದು ಅಥವಾ ಮರುವಿಂಗಡಣೆಯಂತೆ 82 ವಾರ್ಡಗಳಿಗೆ ಚುನಾವಣೆ ನಡೆಯಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಬಹುತೇಕ ಪಾಲಿಕೆ ಸದಸ್ಯರ ಅಭಿಮತದಂತೆ ಹಳೆಯ ಮೀಸಲಾತಿಯಂತೆ ಹಳೆಯ ವಾರ್ಡುಗಳಿಗಷ್ಟೆ ಚುನಾವಣೆ ನಡೆಯಲಿದೆ ಎಂದು ಹೇಳಲಾಗುತ್ತಿದೆಯಾದರೂ ಕೋರ್ಟ ಯಾವ ಅದೇಶ ನೀಡುತ್ತದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಮಾರ್ಚ 2019ಕ್ಕೆ ಪಾಲಿಕೆಯಲ್ಲಿ ಸುಧೀರ ಸರಾಫ್ ಮೇಯರ್‌ಗಿರಿಯೊಂದಿಗೆ ಬಿಜೆಪಿ ಆಡಳಿತ ಕೊನೆಗೊಂಡಿತ್ತು.ತಕ್ಷಣ ರಾಜ್ಯ ಸರ್ಕಾರ ಚುನಾವಣೆ ಘೋಷಿಸಬೇಕಾಗಿತ್ತಾದರೂ ಸರ್ಕಾರದ ವಾರ್ಡವಾರು ಮೀಸಲಾತಿ ವಿರುದ್ದ ಕೆಲವರು ಕೋರ್ಟ ಕಟ್ಟೆ ಹತ್ತಿದ್ದರು.
ತದನಂತರ ತೆನೆ -ಕೈ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎರಡನೆ ಬಾರಿಗೆ ವಾರ್ಡವಾರು ಮೀಸಲಾತಿ ಪ್ರಕಟಿಸಲಾಯಿತು.
67 ಇದ್ದ ವಾರ್ಡಗಳು 82 ಕ್ಕೆ ಏರಿಕೆಯಾಗಿತ್ತು.ಮರುವಿಂಗಡಣೆ ಪ್ರಶ್ನಿಸಿ ಸಂಜಯ ಕಪಟಕರ,ವೆಂಕಟೇಶ ಮೇಸ್ತ್ರಿ ಮತ್ತಿತರರು ತಕರಾರು ಸಲ್ಲಿಸಿದ್ದರು.
ನಾಳೆಯ ಹೈಕೋರ್ಟ ವಿಭಾಗೀಯ ಪೀಠದ ತೀರ್ಪಿನನ್ವಯ ಚುನಾವಣೆ ನಿಶ್ಚಿತವಾಗಿದ್ದು ಈಗಾಗಲೇ ಹಳೆಯ 67 ವಾರ್ಡಗಳಿಗೆ ಹಳೆಯ ಮೀಸಲಾತಿ ಲೆಕ್ಕಾಚಾರ ಹಾಕಿ ಅನೇಕರು ಸದ್ದಿಲ್ಲದೇ ಚಟುವಟಿಕೆಗಳು ಆರಂಭಗೊಂಡಿವೆ.
Kshetra Samachara
09/12/2020 05:05 pm