ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರೈತ ಹೋರಾಟಕ್ಕೆ ಬೆಂಬಲ ನೀಡಿದ ವೀರ ಯೋಧ: ಠಾಣೆಗೆ ಕರೆದೊಯ್ದ ಖಾಕಿ ಪಡೆ

ಹುಬ್ಬಳ್ಳಿ: ಎಪಿಎಂಸಿ ಕಾಯಿದೆ ಹಾಗೂ ಭೂ ಸುಧಾರಣಾ ಕಾಯಿದೆ ವಿರೋಧಿಸಿ ದೇಶಾದ್ಯಂತ ಕರೆ ನೀಡಿರುವ ಭಾರತ ಬಂದ್ ಗೆ ಹುಬ್ಬಳ್ಳಿಯಲ್ಲಿ ರೈತರ ಹೋರಾಟಕ್ಕೆ ದೇಶ ಕಾಯುವ ಸೈನಿಕ ಬೆಂಬಲ ನೀಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಬಳಿ ಪ್ರತಿಭಟನಾಕಾರರಿಗೆ ಬೆಂಬಲ ನೀಡಿದ ಸೈನಿಕ,ರಜೆ ಮೇಲೆ ಆಗಮಿಸಿರುವ ಸೈನಿಕ ರಮೇಶ ಮಾಡಳ್ಳಿ ಎಂಬುವವರು ನಾನು ಕೂಡ ರೈತನ ಮಗ ಈ ಹಿನ್ನೆಲೆಯಲ್ಲಿ ರೈತ ಹೋರಾಟಕ್ಕೆ ಹಸಿರು ವಸ್ತ್ರ ಧರಿಸಿ ಪ್ರತಿಭಟನೆ ಬೆಂಬಲ ಸೂಚಿಸಿದರು.

ಕುಂದಗೋಳ ತಾಲೂಕಿನ ಬರದ್ವಾಡ್ ಗ್ರಾಮದ ಸೈನಿಕ ರಮೇಶ ಮಾಡಳ್ಳಿ ಅವರು,ಅನ್ನದ ಬೆಲೆ ನನಗೆ ಗೊತ್ತು ಹೀಗಾಗಿ ರೈತರ ಹೋರಾಟಕ್ಕೆ ಬೆಂಬಲ ಎಂದರು. ಸಿವಿಲ್‌ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕ ಭಾರತ ಬಂದ್ ಗೆ ಬೆಂಬಲ ಸೂಚಿಸಿದ ಬೆನ್ನಲ್ಲೇ ಸೈನಿಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯಲಾಯಿತು.

Edited By : Nagesh Gaonkar
Kshetra Samachara

Kshetra Samachara

08/12/2020 10:32 am

Cinque Terre

45.73 K

Cinque Terre

6

ಸಂಬಂಧಿತ ಸುದ್ದಿ