ಹುಬ್ಬಳ್ಳಿ: ಎಪಿಎಂಸಿ ಕಾಯಿದೆ ಹಾಗೂ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ನಾಳೆ ಭಾರತ್ ಬಂದ್ ಹಿನ್ನೆಲೆಯಲ್ಲಿಂದು ಹುಬ್ಬಳ್ಳಿ ಸರ್ಕಿಟ್ ಹೌಸ್ ನಲ್ಲಿ ಸಭೆ ನಡೆಸಿದ ರೈತ ಮುಖಂಡರು ಹಾಗೂ ಹಲವಾರು ಕನ್ನಡಪರ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸುವುದಾಗಿ ಸಭೆಯಲ್ಲಿ ತೀರ್ಮಾನ ಕೈಗೊಂಡರು.
ಹೌದು..ನಾಳೆ ಭಾರತ್ ಬಂದ್ ಗೆ ರೈತರಿಂದ ಕರೆ ಕೊಟ್ಟ ಹಿನ್ನೆಲೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವ್ಯಾಪಕ ಬೆಂಬಲ ದೊರಕುವ ಸಾಧ್ಯತೆ ಇದೆ.ಇವತ್ತು ಹುಬ್ಬಳ್ಳಿಯಲ್ಲಿ ನಡೆದ ಎಲ್ಲಾ ಸಂಘಟನೆಗಳ ಸಭೆಯಲ್ಲಿ ನಾಳೆಯ ಬಂದ್ ಗೆ ಬೆಂಬಲ ಸಿಕ್ಕಿದ್ದು,ವಿವಿಧ ರೈತ ಸಂಘಟನೆಗಳು, ಜಿಲ್ಲಾ ಕಾಂಗ್ರೆಸ್ ಘಟಕ, ಸೇರಿದಂತೆ ದಲಿತ ಸಂಘಟನೆಗಳು ಮತ್ತು ಕನ್ನಡ ಪರ ಸಂಘಟನೆಗಳಿಂದ ಬಂದ್ ಗೆ ಬೆಂಬಲ ದೊರಕಿದೆ.ಇನ್ನೂ ಈ ಬಂದ್ ವೇಳೆಯಲ್ಲಿ ಪೊಲೀಸರು ನಮ್ಮನ್ನ ತಡೆದರೆ ಅವರ ವಿರುದ್ಧವೇ ಪ್ರತಿಭಟನೆ ಮಾಡುವುದಾಗಿ ಈ ವೇಳೆಯಲ್ಲಿ ರೈತ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಬಂದ್ ಗೆ ಸುಮಾರು ೧೦ ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ ಸೂಚಿಸಿದ್ದು,ಇಂದು ಎಲ್ಲಾ ಸಂಘಟನೆಗಳ ಸದಸ್ಯರ ಸಭೆ ಕರೆದಿರುವ ರೈತ ಮುಖಂಡರು,ವಿವಿಧ ಸಂಘಟನೆಗಳು ಬಂದ್ ಗೆ ಪೂರಕ ಬೆಂಬಲ ನೀಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
Kshetra Samachara
07/12/2020 04:45 pm