ಹುಬ್ಬಳ್ಳಿ: ಮೊಬೈಲ್ ನೆಟ್ ವರ್ಕ್ ಟವರ್ ಗಳನ್ನು ನಿರ್ಮಾಣ ಮಾಡಬೇಕು ಅಂದರೆ ಆ ಸ್ಥಳದಲ್ಲಿ ಎಲ್ಲರ ಒಪ್ಪಿಗೆ ಬೇಕು..ಸ್ಥಳ ನೀಡುವ ಮಾಲೀಕನ ಒಪ್ಪಿಗೆಯ ಜೊತೆಗೆ ಸ್ಥಳೀಯರು ಸಹ ಒಮ್ಮತ ವ್ಯಕ್ತಪಡಿಸಬೇಕು.ಆದರೆ ಇಲ್ಲೊಂದು ಸ್ಥಳದಲ್ಲಿ ಮಾತ್ರ ಒಪ್ಪಿಗೆ ಇಲ್ಲದೆ ಇದ್ದರು ಸಹ ಬೆಳ್ಳಂಬೆಳಿಗ್ಗೆಯೇ ಟವರ್ ನಿರ್ಮಾಣಕ್ಕೆ ಸದ್ದಿಲ್ಲದೆ ಕೆಲಸ ನಡೆದಿರೋದು ಸದ್ಯ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಹೀಗೆ ರಸ್ತೆಗೆ ಇಳಿದು ಜನರಿಂದ ಪ್ರತಿಭಟನೆ..ನೆಟ್ ವರ್ಕ್ ಕಂಪನಿಯ ವಿರುದ್ಧ ಧಿಕ್ಕಾರ ಕೂಗುತ್ತಿರುವ ಸ್ಥಳೀಯರು. ಈ ಎಲ್ಲ ದೃಶ್ಯ ಕಂಡು ಬಂದಿದ್ದು ವಾಣಿಜ್ಯನಗರಿ ಹುಬ್ಬಳ್ಳಿಯ ನೇಕಾರ ನಗರದ ಅಜ್ಮಿರ್ ಬಡಾವಣೆಯಲ್ಲಿ..ಹೀಗೆ ಜನರು ರಸ್ತೆಗೆ ಇಳಿಯಲು ಕಾರಣವೇ ಇದ್ದಕ್ಕಿಂದಂತೆ ನಿರ್ಮಾಣ ಹಂತದಲ್ಲಿರುವ ಮೊಬೈಲ್ ನೆಟ್ ವರ್ಕ್ ಟವರ್ ನ ಕಾಮಗಾರಿ..ಕಳೆದ ವರ್ಷವೇ ಇಲ್ಲಿನ ನಿವಾಸಿಯಾಗಿರುವ ನಾಜಿಮ್ ಮುಲ್ಲಾ ಅವರ ಜೊತೆಗೆ ಜಿಯೋ ಕಂಪನಿಯ ಟವರ್ ರ ಸಿಬ್ಬಂದಿ ಒಪ್ಪಂದ ಮಾಡಿಕೊಂಡಿದ್ದರು. 50 ಸಾವಿರ ಹಣವನ್ನು ಸಹ ಕಂಪನಿಯಿಂದ ಪಡೆದಿದ್ದರು. ಆದರೆ ಸ್ಥಳೀಯರು ಇಲ್ಲಿ ಟವರ್ ಬೇಡ ಎಂದು ಹೇಳಿದ್ದರಿಂದ ಆ ಹಣವನ್ನು ಹಿಂತಿರುಗಿಸಿ ಟವರ್ ಜೊತೆಗಿನ ಒಪ್ಪಂದವನ್ನು ಹಿಂಪಡೆಯಲು ಹೋದಾಗ ಸ್ಥಳೀಯ ಪೊಲೀಸರೊಂದಿಗೆ ಆಗಮಿಸಿ 4 ಲಕ್ಷ ದಂಡ ಹಾಕುವ ಬೆದರಿಕೆ ಹಾಕಿದ್ದಾರೆ ಅಂತ ಆರೋಪ ಮಾಡಿದ್ದಾರೆ.
ಇನ್ನೂ ಸ್ಥಳೀಯರು ಈಗಾಗಲೇ ಇಲ್ಲಿ ಬಂದಿರುವ ಹಲವಾರು ನೆಟ್ ವರ್ಕ್ ಟವರ್ ಗಳನ್ನು ಸ್ಥಳಾಂತರಿಸಿದ್ದಾರೆ. ಮಕ್ಕಳ ಮತ್ತು ಹಿರಿಯರ ಮೇಲೆ ಹೆಚ್ಚು ಪ್ರಭಾವ ಬೀರುವ ಈ ಟವರ್ ಗಳು ಏರಿಯಾದಲ್ಲಿ ಬೇಡ ಅಂತ ಪದೇ ಪದೇ ವಿನಂತಿಸಿಕೊಂಡರು ಸಹ ಕಂಪನಿಗಳು ಮಾತ್ರ ಮನೆಯ ಮೇಲೆಯೇ ಟವರ್ ನಿರ್ಮಾಣಕ್ಕೆ ಏಕಾಏಕಿ ಮುಂದಾಗುತ್ತಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.ಟವರ್ ಹಾಕಲು ಒಪ್ಪಿಗೆ ಸಿಗದಿದ್ದರೂ ಸಹ ಹೀಗೆ ಟವರ್ ಹಾಕಲು ಬಂದಿದ್ದರಿಂದ ತಡೆ ಹಿಡಿಯಲಾಗಿದೆ. ಒಪ್ಪಿಗೆಯೇ ಇಲ್ಲದ ಟವರ್ ಕಾರ್ಯವನ್ನ ಬೆಳಿಗ್ಗೆ ಆರಂಭಿಸಿದ್ದರಿಂದ ನಮಗೆ ಈ ಟವರ್ ಇಲ್ಲಿ ಬೇಡ ಅನ್ನೋ ಮಾತನ್ನ ಸ್ಥಳೀಯರು ಹೇಳುತ್ತಿದ್ದಾರೆ
ಒಟ್ಟಾರೆ ಸ್ಥಳೀಯರ ಆಕ್ರೋಶದ ನಡುವೆಯೇ ಟವರ್ ಕಾರ್ಯ ಸದ್ದಿಲ್ಲದೆ ಆರಂಭವಾಗಿದ್ದು ಇದನ್ನು ನಾವು ತಡೆಹಿಡಿಯುತ್ತೇವೆ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಪ್ಪಿಗೆ ಇಲ್ಲದೆ ಹೀಗೆ ಟವರ್ ನಿರ್ಮಾಣಕ್ಕೆ ಅನುಮತಿ ನೀಡಿದ್ದಾದರೂ ಯಾರು ಅನ್ನುವ ಪ್ರಶ್ನೆಯನ್ನು ಸದ್ಯ ಸ್ಥಳೀಯರು ಕೇಳುತ್ತಿದು, ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಈ ಟವರ್ ಸಮಸ್ಯೆಯನ್ನ ಬಗೆಹರಿಸಬೇಕಿದೆ.
Kshetra Samachara
28/11/2020 03:55 pm