ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Breaking: ಹುಬ್ಬಳ್ಳಿ: 'ನವನಗರ ಠಾಣೆಯಿಂದ ಮುಕ್ತಿ ನೀಡಿ'- ಪ್ರತಿಭಟನೆಗೆ ಇಳಿದ ಪೊಲೀಸರು

ಹುಬ್ಬಳ್ಳಿ: ಇಷ್ಟುದಿನ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ರಕ್ಷಣೆ ಕೊಡುತ್ತಿದ್ದ ಪೊಲೀಸರು ಈಗ ತಾವೇ ಠಾಣೆ ಮುಂದೆ ನವನಗರ ಠಾಣೆಯಿಂದ ಮುಕ್ತಿ ಕೊಡಿ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

ಹೌದು. ಗೃಹ ಸಚಿವರ ತವರು ಜಿಲ್ಲೆಯಲ್ಲಿಯೇ ಪೊಲೀಸರು ಪ್ರತಿಭಟನೆಗೆ ಮುಂದಾಗಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಪೊಲೀಸರೇ ಈಗ ಸಾಮೂಹಿಕ ವರ್ಗಾವಣೆಗೆ ಮಾಡಿ ಎಂದು ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿಯ ನವನಗರ ಪೊಲೀಸ್ ಅಧಿಕಾರಿ ಮತ್ತು ವಕೀಲರು ನಡುವೆ ನಡೆದ ಗಲಾಟೆ ಈಗ ಬೇರೆ ರೀತಿಯ ರೂಪ ಪಡೆದುಕೊಳ್ಳುತ್ತಿದ್ದು, ಪೊಲೀಸರು ಸಾಮೂಹಿಕವಾಗಿ ವರ್ಗಾವಣೆ ಕೋರಿದ್ದಾರೆ.

ಬೆಳಿಗ್ಗೆ ಧಾರವಾಡದಲ್ಲಿ ವಕೀಲರು ಮೇಲೆ ಪೊಲೀಸರ ಕ್ರಮವನ್ನು ಖಂಡಿಸಿ ಪೊಲೀಸರ ಮೇಲೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದರ ಬೆನ್ನಲ್ಲೇ ಇತ್ತ ನವನಗರ ಪೊಲೀಸರು ನಮ್ಮನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಿ ಎಂದು ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು.

ನಗರದ ಎಪಿಎಂಸಿ ಠಾಣೆಯ ಎದುರು ಜಮಾಯಿಸಿದ 80ಕ್ಕೂ ಹೆಚ್ಚು ಠಾಣೆಯ ಸಿಬ್ಬಂದಿ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

Edited By : Vijay Kumar
Kshetra Samachara

Kshetra Samachara

27/11/2020 07:09 pm

Cinque Terre

51.74 K

Cinque Terre

8

ಸಂಬಂಧಿತ ಸುದ್ದಿ