ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಕ್ಕಳ ಮತ್ತು ಮಹಿಳಾ ಕಳ್ಳಸಾಗಾಣಿಕೆ ಜಾಗೃತಿ ಕಾರ್ಯಕ್ರಮ

ಹುಬ್ಬಳ್ಳಿ: ಮಕ್ಕಳ ದಿನಾಚರಣೆ ನಿಮಿತ್ತ ಬೆಳಗಾವಿ ಸಮಾಜ ಸೇವಾ ಸಂಸ್ಥೆ ಹಾಗೂ ಮಕ್ಕಳು ಸಹಾಯವಾಣಿ 1098 ವತಿಯಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿಂದು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಜಯಪ್ಪ ದೊಡಮನಿ ರೈಲ್ವೆ ಮಕ್ಕಳ ಸಹಾಯ ವಾಣಿ ಸಂಯೋಜಕರು ಮಾತನಾಡಿ,ದೇಶದಲ್ಲಿಯೇ ಹುಬ್ಬಳ್ಳಿ ರೈಲ್ವೆ ನಿಲ್ದಾಣ ದೊಡ್ಡದಾಗಿದ್ದು,ಹೊರ ರಾಜ್ಯಗಳಿಂದ ರೈಲುಗಳು ಬರುವುದರಿಂದ ನಿರ್ಗತಿಕ ಮಕ್ಕಳು ಪತ್ತೆಯಾಗುತ್ತಾರೆ.ಅವರನ್ನು ಪೋಷಣೆ ಮತ್ತು ರಕ್ಷಣೆಯ ಮಾಡುವುದು ಈ ರೈಲ್ವೆ ಮಕ್ಕಳ ಸಹಾಯವಾಣಿ-1098 ಕಾರ್ಯವು ತುಂಬಾ ಶ್ಲಾಘನೀಯವಾಗಿದೆ ಎಂದು ಹೇಳಿದರು.

ನಂತರ ಎಸ್.ಆರ್. ಕಾರೆಕರ್ ರೈಲ್ವೆ ರಕ್ಷಣಾ ದಳ ಪೊಲಿಸ್ ಹೊಸದಾಗಿ ನೇಮಕಾತಿಯಾದ ಸಿಬ್ಬಂದಿಗಳಿಗೂ ಮಕ್ಕಳ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಮಕ್ಕಳ ರಕ್ಷಣೆ ನಮ್ಮೆಲ್ಲರ ಹೋಣೆ ಎಂದು ಪ್ರತಿಜ್ಞೆ ಮಾಡುವ ಮೂಲಕ ಮಕ್ಕಳ ಸಹಾಯವಾಣಿಗೆ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.

Edited By : Nagaraj Tulugeri
Kshetra Samachara

Kshetra Samachara

21/11/2020 10:00 pm

Cinque Terre

28.93 K

Cinque Terre

0

ಸಂಬಂಧಿತ ಸುದ್ದಿ