ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾ ಆ್ಯಂಡ್ ಆರ್ಡರ್ ಡಿಸಿಪಿಯಾಗಿ ಐಪಿಎಸ್ ಅಧಿಕಾರಿ ಕೆ.ರಾಮರಾಜನ್

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದ ಪೊಲೀಸ್ ಕಮೀಷನರೇಟ್ ನ ಕಾನೂನು ಸುವ್ಯವಸ್ಥೆ ನೂತನ ಡಿಸಿಪಿಯಾಗಿ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ. ರಾಮರಾಜನ್ ಅವರನ್ನು ಓಓಡಿ ಕರ್ತವ್ಯದ ಆಧಾರದ ಮೇಲೆ ನಿಯೋಜನೆ ಮಾಡಲಾಗಿದೆ.

ಸಧ್ಯ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ನಲ್ಲಿ ಇರುವ ಡಿಸಿಪಿ ಕಾನೂನು ಸುವ್ಯವಸ್ಥೆ ಹುದ್ದೆ ಖಾಲಿ ಇದ್ದು ಅದನ್ನು ಧಾರವಾಡದ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ ಅವರು ಪ್ರಭಾರಿ ಆದೇಶದ ಮೇರೆಗೆ ನಿರ್ವಹಣೆ ಮಾಡುತ್ತಿದ್ದರು.

ಈ ಹಿನ್ನೆಲೆಯಲ್ಲಿ ಈಗ ಹೊಸದಾಗಿ ಓಓಡಿ ಆದೇಶದ ಮೇರೆಗೆ ಕೆ.ರಾಮರಾಜನ್ ಅವರನ್ನು ನಿಯೋಜನೆ ಮಾಡಲಾಗಿದ್ದು,ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿ.ಕೃಷ್ಣಕಾಂತ ಅವರಿಗೆ ಹೊರೆ ಕಡಿಮೆಯಾದಂತಾಗಿದೆ.

Edited By : Nirmala Aralikatti
Kshetra Samachara

Kshetra Samachara

18/11/2020 04:43 pm

Cinque Terre

37.14 K

Cinque Terre

7

ಸಂಬಂಧಿತ ಸುದ್ದಿ