ಧಾರವಾಡ: ಧಾರವಾಡದಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ನಡೆದ ಚುನಾವಣಾ ಮತ ಎಣಿಕೆ ವೇಳೆ ಚುನಾವಣಾ ವೀಕ್ಷಕರ ಕಾರನ್ನೇ ಪೊಲೀಸರು ತಡೆದು ಪೇಚಿಗೆ ಸಿಲುಕಿಕೊಂಡ ಘಟನೆ ನಡೆಯಿತು.
ಇದರಿಂದ ಚುನಾವಣಾ ವೀಕ್ಷಕರೂ ಆಗಿರುವ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರು ಪೊಲೀಸರ ವಿರುದ್ಧ ಗರಂ ಆಗಿದ್ದಾರೆ.
ಮತ ಎಣಿಕೆ ಉಸ್ತುವಾರಿ ನೋಡಿಕೊಳ್ಳಲು ಅವರು ಆಗಮಿಸಿದ ವೇಳೆ ಪೊಲೀಸರು ಅವರ ಕಾರು ತಡೆದು ಯಡವಟ್ಟು ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಶಾಲಿನಿ ಅವರು ಗರಂ ಆಗಿದ್ದಾರೆ. ಸ್ಟ್ರಾಂಗ್ ರೂಮ್ ಓಪನ್ ಮಾಡುವ ವೇಳೆ ಅವರು ಹಾಜರು ಇರಬೇಕಿತ್ತು . ಆದರೆ ಗೇಟ್‌ನಲ್ಲಿ ಪೊಲೀಸರು ವಾಹನ ತಡೆದಿದ್ದರಿಂದ ಈ ವೇಳೆ ಚುನಾವಣಾಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ್‌ಗೆ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಒಳ ಬಂದು ಎಸ್ಪಿ ಕೃಷ್ಣಕಾಂತ್‌ಗೆ ತರಾಟೆ ತೆಗೆದುಕೊಂಡಿದ್ದಾರೆ.
Kshetra Samachara
10/11/2020 04:27 pm