ಧಾರವಾಡ: ವಿನಯ ಕುಲಕರ್ಣಿ ಅವರನ್ನು ಈಗಾಗಲೇ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಸಿಬಿಐ ಬಂಧಿಸಿದೆ. ಆದರೂ ಈ ಕೊಲೆಗೆ ಸಂಬಂಧಿಸಿದಂತೆ ಇನ್ನೂ ಅನೇಕರನ್ನು ವಿಚಾರಣೆ ಮಾಡುತ್ತಲೇ ಇದೆ.
ಇಂದು ಬೆಳಿಗ್ಗೆ ವಿನಯ್ ಅವರ ಸಹೋದರ ವಿಜಯ ಅವರನ್ನು ಮತ್ತೆ ವಿಚಾರಣೆಗೊಳಪಡಿಸಿದ್ದ ಸಿಬಿಐ ಇವರ ಜೊತೆಗೆ ವಿನಯ್ ಅವರ ಸೋದರ ಮಾವ ಚಂದ್ರಶೇಖರ ಇಂಡಿ ಹಾಗೂ ಈ ಹಿಂದೆ ವಿನಯ್ ಅವರ ಆಪ್ತ ಸಹಾಯಕನಾಗಿದ್ದ ಸೋಮಲಿಂಗ ನ್ಯಾಮಗೌಡ ಅವರನ್ನೂ ಸಿಬಿಐ ವಿಚಾರಣೆಗೊಳಪಡಿಸಿತು.
ಬೆಳಿಗ್ಗೆಯಿಂದ ನಿರಂತರ ಹತ್ತು ಗಂಟೆಗಳ ಕಾಲ ಸಿಬಿಐ ಇಬ್ಬರನ್ನೂ ವಿಚಾರಣೆ ನಡೆಸಿ ರಾತ್ರಿ ಕೈಬಿಟ್ಟಿದೆ. ರಾತ್ರಿ 8.30 ರ ಸುಮಾರಿಗೆ ಚಂದ್ರಶೇಖರ ಹಾಗೂ ಸೋಮಲಿಂಗ ಅವರು ಸಿಬಿಐ ವಿಚಾರಣೆ ಮುಗಿಸಿ ಹೊರ ಬಂದರು.
Kshetra Samachara
06/11/2020 09:29 pm