ಧಾರವಾಡ : ಯೋಗೇಶ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಹಾಗೂ ಸಹೋದರ ವಿಜಯ್ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ಉಪನಗರ ಠಾಣೆಯಲ್ಕಿ ವಿಚಾರಣೆ ನಡೆಸುತ್ತಿರುವ ಹಿನ್ನೆಲೆ ಉಪನಗರ ಸುತ್ತ ಪೊಲೀಸ್ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸ್ಥಳಕ್ಕೆ ಎಸಿಪಿ ಅನುಷಾ, ಟ್ರಾಫಿಕ್ ಇನ್ಸ್ಪೆಕ್ಟರ್ ಮಲ್ಲಣಗೌಡ ಹಾಗೂ ಮೀಸಲು ಪಡೆ ಡಿಸಿಪಿ ಎಸ್ ಬಿ ಯಾಧವ್ ಮೊಕ್ಕಾಂ ಹೂಡಿದ್ದು, ಕಾರ್ಯಕರ್ತರ ಆಗಮನ ಹಿನ್ನೆಲೆ ಪೊಲೀಸ್ ಠಾಣೆಗೆ ಬ್ಯಾರಿಕೆಡ್ ಹಾಕಿದ ಸಿಬ್ಬಂದಿಗಳು,ಸ್ಥಳಕ್ಕೆ ಮತ್ತಷ್ಟು ಪೊಲೀಸ್ ಭದ್ರತೆ ನಿಯೋಜಿಸಿಲಾಗಿದೆ.ಒಂದು ಕಡೆ ಕೈ ಕಾರ್ಯಕರ್ತರ ಜಮಾವನೆ ಆಗುತ್ತಿದ್ದು ಠಾಣೆಯ ಸುತ್ತ ಪೊಲೀಸ್ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
Kshetra Samachara
05/11/2020 10:12 am