ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಬೈರಿದೇವರಕೊಪ್ಪದ ದರ್ಗಾ ತೆರವು ಕಾರ್ಯಾಚರಣೆ ಶುರು : ದರ್ಗಾ ಸುತ್ತ ಖಾಕಿ ಸರ್ಪಗಾವಲು

ಹುಬ್ಬಳ್ಳಿ : ಇತಿಹಾಸ ಪ್ರಸಿದ್ಧ ಹುಬ್ಬಳ್ಳಿಯ ಬೈರಿದೇವರಕೊಪ್ಪದ ದರ್ಗಾ ತೆರವು ಕಾರ್ಯಚರಣೆಯನ್ನು ಜಿಲ್ಲಾಡಳಿತ ಹಾಗೂ ಬಿ ಆರ್ ಟಿ ಎಸ್,ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಇಂದು ಬೆಳ್ಳಿಗ್ಗೆ 6.30 ರಿಂದ ಪ್ರಾರಂಭವಾಗಿದೆ.

ಕಾರ್ಯಚರಣೆ ಯಾರಿಗೂ ಕಾಣದಂತೆ ದರ್ಗಾ ಸುತ್ತಲೂ ತಗಡುಗಳನ್ನು ಹಾಕಿ ವ್ಯವಸ್ಥೆ ಮಾಡಲಾಗಿದ್ದು ಕಾರ್ಯಾಚರಣೆಗೆ ಎರಡು ಜೆಸಿಬಿ ,ಟ್ರ್ಯಾಕ್ಟರ್ ಹಾಗೂ ಪೌರ ಕಾರ್ಮಿಕರು ಸೇರಿದಂತೆ,ಅಂತರ ಜಿಲ್ಲಾ ಪೊಲೀಸರು ಸೇರಿದಂತೆ,ದರ್ಗಾ ಸುತ್ತಲು ಶಸ್ತ್ರ ಸಜ್ಜಿತರಾದ ಆರ್ ಎ ಎಫ್ ವಿಶೇಷ ಪೊಲೀಸ್ ತುಕಡಿಯನ್ನು ನಿಯೋಜನೆ ಮಾಡಲಾಗಿದೆ.

ಅಷ್ಟೇ ಅಲ್ಲದೆ ಈ ಮಾರ್ಗದಲ್ಲಿ ಓಡಾಡುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು ಧಾರವಾಡ ಕಡೆಯಿಂದ ಹುಬಳ್ಳಿಯತ್ತ ಬರುವ ವಾಹನಗಳನ್ನು ಎಪಿಎಂಸಿ ಮುಖಾಂತರ ಹುಬ್ಬಳ್ಳಿಯತ್ತ ಹಾಗೂ ಹುಬ್ಬಳ್ಳಿಯಿಂದ ಧಾರವಾಡ ಕಡೆ ಹೋಗುವ ವಾಹನಗಳನ್ನು ಬೈರಿದೇವರಕೊಪ್ಪದಿಂದ ಗಾಮನಗಟ್ಟಿ ಮಾರ್ಗವಾಗಿ ಧಾರವಾಡಕ ತಲುಪುವ ವ್ಯವಸ್ಥೆ ಮಾಡಲಾಗಿದೆ.

ಅಷ್ಟೇ ಅಲ್ಲದೇ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನಗರದ ಪ್ರಮುಖ ಪ್ರದೇಶಗಳಲ್ಲಿ ಖಾಕಿ ಪಡೆ ಹೈ ಅಲರ್ಟ್ ಆಗಿದೆ.

-ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

21/12/2022 08:50 am

Cinque Terre

158.39 K

Cinque Terre

12

ಸಂಬಂಧಿತ ಸುದ್ದಿ