ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಜಿಲ್ಲಾ ಪೊಲೀಸರಿಂದ ಏಕತಾ ಓಟ

ಧಾರವಾಡ: ಮಾಜಿ ಪ್ರಧಾನಿ ವಲ್ಲಭ ಭಾಯಿ ಪಟೇಲ ಅವರ ಜನ್ಮದಿನದ ನಿಮಿತ್ತ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಮಾರ್ಗದರ್ಶನದಲ್ಲಿ ಇಂದು ಮಧ್ಯಾಹ್ನ ಧಾರವಾಡ ತಾಲೂಕಿನ ನರೆಂದ್ರ ಗ್ರಾಮದಲ್ಲಿ ರಾಷ್ಟ್ರೀಯ ಏಕತಾ ಓಟ ಏರ್ಪಡಿಸುವ ಮೂಲಕ ಜನಜಾಗೃತಿ ಮೂಡಿಸಲಾಯಿತು.

ಧಾರವಾಡ ಗ್ರಾಮೀಣ ಸಿಪಿಐ ಎಸ್.ಸಿ.ಪಾಟೀಲ ಮತ್ತು ಗರಗ ಪಿಎಸ್ಐ ಪ್ರಸಾದ ಪಣೇಕರ ನೇತೃತ್ವದಲ್ಲಿ ಪಿಎಸ್ಐ ಮಹೇಂದ್ರಕುಮಾರ ನಾಯಕ್ ಹಾಗೂ ಕಿರಣ ಮೋಹಿತೆ ಅವರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪೊಲೀಸ್ ಸಿಬ್ಬಂದಿಗಳೊಂದಿಗೆ ಏಕತಾ ಓಟದ ಮೆರವಣಿಗೆ ಮೂಲಕ ಸಂಚರಿಸಿ, ಸಾರ್ವಜನಿಕರೊಂದಿಗೆ ಏಕತಾ ದಿನದ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಏಕತಾದಿನದ ಅಂಗವಾಗಿ ಸಮಾಜದಲ್ಲಿ ಏಕತೆ, ಭಾವೈಕ್ಯತೆ, ಸಾಮರಸ್ಯ ಕಾಪಾಡುವ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಿದರು.

Edited By : Nirmala Aralikatti
Kshetra Samachara

Kshetra Samachara

31/10/2020 07:25 pm

Cinque Terre

23.12 K

Cinque Terre

0

ಸಂಬಂಧಿತ ಸುದ್ದಿ