ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮತದಾರರಿಗೆ ಅನುಕೂಲ ಆಗಲೆಂದು ಡಿಸಿ ಎಂತಹ ಕೆಲಸ ಮಾಡಿದ್ದಾರೆ ನೋಡಿ

ಧಾರವಾಡ: ನಾಳೆ ನಡೆಯಲಿರುವ ಪಶ್ಚಿಮ ಪದವೀಧರರ ಚುನಾವಣೆಗೆ ಮತದಾನ ಮಾಡಲು ಬರುವ ಪದವೀಧರರಿಗೆ ಅನುಕೂಲ ಆಗಲೆಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಹೊಸ ವ್ಯವಸ್ಥೆಯೊಂದನ್ನು ಮಾಡಿ ಚುನಾವಣಾಧಿಕಾರಿಗಳಿಂದ ಸೈ ಎನಿಸಿಕೊಂಡಿದ್ದಾರೆ.

ಪ್ರತಿಯೊಬ್ಬ ಪದವೀಧರ ಮತದಾರರ ಮೊಬೈಲ್ ಗೆ ಎಸ್ಎಂಎಸ್ ಒಂದನ್ನು ಕಳುಹಿಸಲಾಗಿದ್ದು, ಅದನ್ನು ಕ್ಲಿಕ್ ಮಾಡಿದರೆ ಸಾಕು ಅದು ಆ ಮತದಾರ ತಾನು ಯಾವ ಬೂತ್ ನಲ್ಲಿ ಮತದಾನ ಮಾಡಬೇಕು ಎಂಬುದನ್ನು ತೋರಿಸುತ್ತದೆ ಅಷ್ಟೇ ಅಲ್ಲ. ಆ ಬೂತ್ ಗೆ ಹೇಗೆ ಹೋಗಬೇಕು ಎಂಬುದರ ಮ್ಯಾಪ್ ಕೂಡ ತೋರಿಸುತ್ತದೆ. ಈ ವ್ಯವಸ್ಥೆಗೆ ಈಗಾಗಲೇ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸ್ವತಃ ಡಿಸಿ ನಿತೇಶ್ ಪಾಟೀಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಧಾರವಾಡ, ನವಲಗುಂದ, ಕುಂದಗೋಳ ಸೇರಿದಂತೆ ಜಿಲ್ಲೆಯಾದ್ಯಂತ 54 ಮತಗಟ್ಟೆಗಳನ್ನು ಮಾಡಲಾಗಿದೆ. ಈಗಾಗಲೇ ಸಿಬ್ಬಂದಿ ಮತಗಟ್ಟೆಗಳಿಗೆ ತೆರಳಿದ್ದಾರೆ. ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಯಾವ ಮತದಾರ ಕೊರೊನಾ ಸೋಂಕಿಗೆ ಒಳಗಾಗಿದ್ದಾರೋ ಅಂತವರಿಗೆ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದರು.

ಈಗಾಗಲೇ ಎಲ್ಲಾ ಮದ್ಯದ ಅಂಗಡಿ, ಝರಾಕ್ಸ್ ಹಾಗೂ ಪೇಪರ್ ಸ್ಕ್ಯಾನಿಂಗ್ ಸೆಂಟರ್ ಗಳನ್ನು ಬಂದ್ ಮಾಡಲಾಗಿದೆ. ಮತದಾರರು ಬ್ಯಾಲೆಟ್ ಪೇಪರ್ ಮೇಲೆ ಸಹಿ ಮಾಡುವ ಹಾಗಿಲ್ಲ, ಹೆಬ್ಬೆಟ್ಟು ಒತ್ತುವ ಹಾಗಿಲ್ಲ ಹಾಗೆ ಮಾಡಿದರೆ ಅಂತಹ ಮತಗಳು ಅಸಿಂಧುವಾಗುತ್ತವೆ. ಈಗಾಗಲೇ ಈ ಸಂಬಂಧ ಯಾವ ರೀತಿ ಮತದಾನ ಮಾಡಬೇಕು ಎಂದು ಮತದಾರರಿಗೆ ಸಂದೇಶ ಕಳುಹಿಸಲಾಗಿದೆ ಎಂದರು.

ನಾಳೆ ರಾತ್ರಿ ಉತ್ತರ ಕನ್ನಡ, ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಯ ಎಲ್ಲ ಮತಪೆಟ್ಟಿಗೆಗಳು ಧಾರವಾಡದ ಕೃಷಿ ವಿವಿಯ ಸ್ಟ್ರಾಂಗ್ ರೂಮ್ ಗೆ ಬರಲಿವೆ ಎಂದು ಡಿಸಿ ತಿಳಿಸಿದರು.

Edited By : Nagesh Gaonkar
Kshetra Samachara

Kshetra Samachara

27/10/2020 06:45 pm

Cinque Terre

26.86 K

Cinque Terre

3

ಸಂಬಂಧಿತ ಸುದ್ದಿ