ಹುಬ್ಬಳ್ಳಿ: ದೆಹಲಿಯ ಹಿಂಡನ್ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಕಾರ್ಯಾಚರಣೆಯ ಕಾರಣಗಳಿಂದಾಗಿ ಅಕ್ಟೋಬರ್ 16 ರಂದು ಹಿಂಡನ್ (ದೆಹಲಿ) ಮತ್ತು ಹುಬ್ಬಳ್ಳಿ ನಡುವಿನ ವಿಮಾನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸ್ಟಾರ್ ಏರ್ ನಿರ್ವಹಣೆ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿದ್ದು,ವಿಮಾನವು ಸಂಜೆ 4.35 ಕ್ಕೆ ಹಿಂಡನ್ ವಿಮಾನ ನಿಲ್ದಾಣದಿಂದ ಹೊರಟು ಸಂಜೆ 7: 10 ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ತಲುಪಲು ನಿರ್ಧರಿಸಲಾಗಿತ್ತು. ಆದರೇ ಕಾರ್ಯಾಚರಣೆ ಕಾರಣದಿಂದ ಹಾರಾಟದ ಮತ್ತು ಮರಳುವ ಪ್ರಯಾಣವನ್ನು ಸಹ ಸ್ಥಗಿತಗೊಳಿಸಲಾಗಿದೆ.
ವರದಿಯ ಪ್ರಕಾರ, ಪ್ರಯಾಣಿಕರು ಈಗಾಗಲೇ ಬುಕಿಂಗ್ ಮಾಡಿದ್ದರೇ ಸಂಪೂರ್ಣ ಮರುಪಾವತಿಯನ್ನು ಪಡೆದುಕೊಳ್ಳಬಹುದು ಅಥವಾ ಅಕ್ಟೋಬರ್ 18 ರವರೆಗೆ ತಮ್ಮ ಪ್ರಯಾಣವನ್ನು ಮರುಹೊಂದಿಸಬಹುದು ಎಂದು ಸ್ಟಾರ್ ಏರ್ ಪ್ರಕಟಣೆಯಲ್ಲಿ ತಿಳಿಸಿದೆ.
Kshetra Samachara
16/10/2020 10:37 am