ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್........
ಹುಬ್ಬಳ್ಳಿ- ಪಬ್ಲಿಕ್ ನೆಕ್ಸ್ಟ್ ವರದಿಗೆ ಎಚ್ಚೆತ್ತಕೊಂಡ ಅಧಿಕಾರಿಗಳು, ನಗರದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವಿದೇಶಿ ಸಿಗರೇಟ್ ಮೇಲೆ ಆರೋಗ್ಯ ಮುಖ್ಯಾಧಿಕಾರಿ ಡಾ. ಶ್ರೀಧರ್ ಹಾಗೂ ತಂಬಾಕು ನಿಯಂತ್ರಣ ಅಧಿಕಾರಿಗಳು ದಾಳಿ ನಡೆಸಿ ನೋಟಿಸ್ ನೀಡಿದ್ದಾರೆ...
ಎಗ್ಗಿಲ್ಲದೇ ನಡುಯುತ್ತಿದೆ ಸಿಗರೇಟ್ ಮಾಫಿಯಾ! ಗಲ್ಲಿ ಗಲ್ಲಿಗಳಲ್ಲಿ ವಿದೇಶಿ ಸಿಗರೇಟ್ ಘಾಟು ಎಂಬ ಶೀರ್ಷಿಕೆ ಅಡಿಯಲ್ಲಿ, ನಿಮ್ಮ ಪಬ್ಲಿಕ್ ನೆಕ್ಸ್ಟ್ ಸುದ್ದಿಯನ್ನು ಬಿತ್ತರಿಸಿತ್ತು, ಸುದ್ದಿ ನೋಡಿದ ತಂಬಾಕು ನಿಯಂತ್ರಣ ಅಧಿಕಾರಿಗಳು ಅಕ್ರಮವಾಗಿ ವಿದೇಶಿ ಸಿಗರೇಟ್ ಹುಕ್ಕಾ ವಸ್ತುಗಳ ಅಂಗಡಿಗಳ ಮೇಲೆ ದಾಳಿ ನಡೆಸಿ ಮಾಲೀಕರಿಗೆ ನೋಟಿಸ್ ನೀಡಿ ಎಚ್ಚರಿಕೆ ನೀಡಿದ್ದಾರೆ...
ಇಷ್ಟೇ ಅಲ್ಲದೆ, ಸಾರ್ವಜನಿಕರು ಯಾರಿಗಾದರೂ ಅಕ್ರಮವಾಗಿ ವಿದೇಶಿ ಸಿಗರೇಟ್ ಮಾರಾಟದ ಬಗ್ಗೆ ಮಾಹಿತಿ ಇದ್ರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದರು..
Kshetra Samachara
14/10/2020 07:37 pm