ಹುಬ್ಬಳ್ಳಿ: ಕೊರೊನಾ ಇಡೀ ಜಗತ್ತನ್ನು ತಲ್ಲಣಗೊಳಿಸಿದೆ. ದೊಡ್ಡ ದೊಡ್ಡ ಉದ್ಯಮಿಗಳಿಗೆ ಹೊಡೆತ ಕೊಟ್ಟಿದೆ. ಜನಸಾಮಾನ್ಯರ ಜೀವನದ ಮೇಲೆ ಹೇಳತೀರದಷ್ಟು, ಪೆಟ್ಟು ನೀಡಿದೆ.
ಲಾಕ್ ಡೌನ್ ಮೇಲೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮಾರ್ಗಸೂಚಿಗಳ ಉಲ್ಲಂಘನೆ ಮಾಡಿದ ವಾಹನ ಸವಾರರಿಂದ ಭಾರಿ ದಂಡ ಸಂಗ್ರಹವಾಗಿದೆ.
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ಪೊಲೀಸರು ಮಾರ್ಚ್ 2020 ರಿಂದ ಸೆಪ್ಟೆಂಬರ್ 2020 ಇಲ್ಲಿಯವರೆಗೂ ಎಮ್ ವಿ ಆ್ಯಕ್ಟ್ ಅಡಿಯಲ್ಲಿ ಪೊಲೀಸ್ ಇಲಾಖೆ ಒಟ್ಟು 50,773 ಪ್ರಕರಣ.ದಾಖಲಾಗಿದ್ದು,ಸ್ಥಳದಲ್ಲೇ 2,59,71,750 ರೂಪಾಯಿ ದಂಡ ವಸೂಲಿ ಮಾಡಿದೆ.
ನ್ಯಾಯಾಲಯದಲ್ಲಿ 9,09,200 ರೂಪಾಯಿ ವಸೂಲಿ ಮಾಡಿ ಒಟ್ಟು 2,68,80,950 ರೂಪಾಯಿ ದಂಡವನ್ನು ವಸೂಲಿ ಮಾಡಲಾಗಿದೆ.
ಈ ಮೂಲಕ ಪೊಲೀಸ್ ಇಲಾಖೆಗೆ ಭಾರಿ ಪ್ರಮಾಣದ ದಂಡ ಹರಿದು ಬಂದಿದೆ.
Kshetra Samachara
13/10/2020 05:43 pm