ಧಾರವಾಡ: ರಾಜ್ಯದಲ್ಲಿ ಈಗಾಗಲೇ ಶೇ.95 ರಷ್ಟು ಬೆಳೆ ಸಮೀಕ್ಷೆ ಮುಗಿದಿದೆ. ಈ ವರ್ಷ ರೈತರಿಂದಲೇ ಬೆಳೆ ಸಮೀಕ್ಷೆ ಮಾಡಿಸಿದ್ದೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿಯವರೆಗೆ 2.15 ಕೋಟಿ ಬೆಳೆ ಸಮೀಕ್ಷೆ ಆಗಿದೆ. ಈಗಾಗಲೇ ಶೇ.95 ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಮತ್ತೆ ಯಾವುದೇ ಸಮೀಕ್ಷೆ ಮಾಡುವುದಿಲ್ಲ ಎಂದರು.
ಕಳೆದ ಸೋಮವಾರ ವಿಮಾ ಕಂಪೆನಿಗಳ ಜೊತೆ ಸಭೆ ನಡೆಸಲಾಗಿದೆ. 2006 ರಿಂದ 2020 ರವರೆಗೆ ಎಲ್ಲ ವಿಮೆಗಳು ಕ್ಲೀಯರ್ ಆಗುತ್ತವೆ. ಕೆಲವೊಂದು ತಾಂತ್ರಿಕ ತೊಂದರೆಗಳಿಂದ ರೈತರಿಗೆ ವಿಮೆ ಹಣ ಸಿಕ್ಕಿರಲಿಲ್ಲ. ಅಂತವರಿಗೆ ಚೆಕ್ ಮೂಲಕ ಪರಿಹಾರ ಕೊಡಲು ಕಂಪೆನಿಗಳಿಗೆ ಸೂಚಿಸಲಾಗಿದೆ. ಇದಕ್ಕೆ ಎಲ್ಲ ಇನ್ಶುರೆನ್ಸ್ ಕಂಪೆನಿಗಳು ಒಪ್ಪಿಕೊಂಡಿವೆ ಎಂದು ಸಚಿವ ಬಿ.ಸಿ.ಪಾಟೀಲ ತಿಳಿಸಿದರು.
Kshetra Samachara
08/10/2020 07:24 pm