ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಪಿಎಸ್ ಅಧಿಕಾರಿಗಳ ಮುಸುಕಿನ ಗುದ್ದಾಟ : ಡಿಸಿಪಿಗೆ ನೋಟಿಸ್ ನೀಡಿದ ಕಮಿಷನರ್

ಹುಬ್ಬಳ್ಳಿ: ಗೃಹ ಸಚಿವರ ತವರು ಜಿಲ್ಲೆಯಲ್ಲಿಯೇ ಐಪಿಎಸ್ ಅಧಿಕಾರಿಗಳ ಶೀತಲ ಸಮರ ಹೊಸ ತಿರುವು ಪಡೆದುಕೊಂಡಿದ್ದು,ಡಿಸಿಪಿ ಕೃಷ್ಣಕಾಂತ ಅವರಿಗೆ ಕಮೀಷನರ್ ಆರ್.ದಿಲೀಪ್ ನೋಟಿಸ್ ನೀಡಿದ್ದಾರೆ.

ಹೌದು..ಮೊನ್ನೆಯಷ್ಟೇ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದ ಡಿಸಿಪಿ ಕೃಷ್ಣಕಾಂತ ಅವಳಿನಗರಗಳ ಪೊಲೀಸ್ ಕಮಿಷನರ್ ವಿರುದ್ಧ ಕಂಟ್ರೋಲ್ ರೂಂ ಮೂಲಕ ಪತ್ರ ಬರೆದು ಅಸಮಾಧಾನ ತೋಡಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಪಿ. ಕೃಷ್ಣಕಾಂತ್ ಅವರಿಗೆ, ಕಮಿಷನರ್ ಆರ್. ದಿಲೀಪ್ ನೋಟಿಸ್ ನೀಡಿದ್ದು,ದಿಲೀಪ್ ಅವರು ಭೇಟಿಗೆ ಅವಕಾಶ ನೀಡುತ್ತಿಲ್ಲ ಎಂದು ಕೃಷ್ಣಕಾಂತ್ ಪತ್ರದಲ್ಲಿ ದೂರಿದ್ದರು.

ಇದರ ಪ್ರತಿಯನ್ನು ಪೊಲೀಸ್ ಮಹಾನಿರ್ದೇಶಕರಿಗೂ ಕಳುಹಿಸಿದ್ದರು. ಇದಕ್ಕೆ ಪ್ರತಿಯಾಗಿ ದಿಲೀಪ್, ಒಂದಷ್ಟು ಪ್ರಶ್ನೆಗಳನ್ನು ಕೇಳಿ ಡಿಸಿಪಿ ಅವರಿಗೆ ನೋಟಿಸ್ ನೀಡಿದ್ದಾರೆ.

ಅಕ್ಟೋಬರ್ 2ರಂದು ಮೂರು ಬಾರಿ ಫೋನ್ ಮೂಲಕ ಸಂಪರ್ಕಿಸಿದ್ದೀರಿ. ಆಗ ಒಮ್ಮೆಯೂ ಭೇಟಿಯಾಗುವ ವಿಷಯ ತಿಳಿಸಿಲ್ಲ.

ಅಲ್ಲದೇ ಭೇಟಿ ವಿಚಾರದ ಕುರಿತು ಪ್ರಸ್ತಾಪ ಮಾಡಿಲ್ಲ ಹಾಗಿದ್ದಾಗ ಒಮ್ಮೆಲೆ ಯಾಕೆ ಪತ್ರ ಬರೆದು ಅಸಮಾಧಾನ ಹೊರಹಾಕಿದ್ದೀರಿ? ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿ ನಾವು ಸಾಕಷ್ಟು ಬಾರಿ ಭೇಟಿಯಾಗಿ, ಚರ್ಚೆ ಕೂಡ ನಡೆಸಿದ್ದೇವೆ.

ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತೀರ್ಮಾನಿಸಿದ್ದೇವೆ. ನಮ್ಮಿಬ್ಬರ ನಡುವೆ ಇಷ್ಟೆಲ್ಲ ಬೆಳವಣಿಗೆಗಳು ನಡೆದರೂ ಭೇಟಿಗೆ ನಿರಾಕರಿಸಿದ್ದೀರಿ ಎಂದು ಪತ್ರದಲ್ಲಿ ಯಾಕೆ ಹೇಳಿದ್ದೀರಿ? ಎನ್ನುವ ಪ್ರಶ್ನೆಗಳನ್ನು ಕಮಿಷನರ್ ಕೇಳಿದ್ದಾರೆ ಎಂಬುದು ತಿಳಿದು ಬಂದಿದೆ.

ಇನ್ನೂ ಕಮಿಷನರ್, ಡಿಸಿಪಿ ನಡುವಿನ ಮುಸುಕಿನ ಗುದ್ದಾಟದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು ಕೂಡಾ ಅಸಮಾಧಾನ ಹೊರಹಾಕಿದ್ದರು. ಕೂಡಲೇ ಇದಕ್ಕೊಂದು ಇತಿಶ್ರೀ ಹಾಕಲಾಗುವುದು ಎಂದು ತಿಳಿಸಿದ್ದರು.

ಅದಕ್ಕೆ ಪೂರಕವಾಗಿ, ಕಮಿಷನರ್ ಅವರು ಸ್ವಯಂಪ್ರೇರಿತವಾಗಿ ವರ್ಗಾವಣೆ ಕೇಳಿದ್ದಾರೆ ಎಂಬುವಂತ ಮಾತುಗಳು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

Edited By : Nirmala Aralikatti
Kshetra Samachara

Kshetra Samachara

08/10/2020 08:32 am

Cinque Terre

29.71 K

Cinque Terre

1

ಸಂಬಂಧಿತ ಸುದ್ದಿ